Recipe: ಬೇಕಾಗುವ ಸಾಮಗ್ರಿ: 1 ಕಪ್ ಪನೀರ್, ಕಾಲು ಕಪ್ ಅಥವಾ 3 ಸ್ಪೂನ್ ಕಾರ್ನ್ ಫ್ಲೋರ್, ಶಾಲೋ ಫ್ರೈ ಮಾಡಲು ಸ್ವಲ್ಪ ಎಣ್ಣೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ, ಕ್ಯಾಪ್ಸಿಕಂ, ಸ್ವಲ್ಪ ಬ್ಲ್ಯಾಕ್ ಪೆಪ್ಪರ್ ಪುಡಿ, ಸ್ವಲ್ಪ ಎಳ್ಳು, ಸೋಯಾ ಸಾಸ್, ಉಪ್ಪು.
ಮಾಡುವ ವಿಧಾನ: 1 ಸಣ್ಣ ಬೌಲ್‌ನಲ್ಲಿ ಪನೀರ್, ಕಾರ್ನ್‌ಫ್ಲೋರ್, ಉಪ್ಪು ಹಾಕಿ ಮಿಕ್ಸ್ ಮಾಡಿ ಬದಿಗಿರಿಸಿ. ಪ್ಯಾನ್ ಬಿಸಿ ಮಾಡಿ, ಸ್ವಲ್ಪ ಎಣ್ಣೆ ಹಾಕಿ ಕೋಟೇಡ್ ಪನೀರ್ ಹಾಕಿ ತವ್ವಾ ಫ್ರೈ ಮಾಡಿ.
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ, ಕ್ಯಾಪ್ಸಿಕಂ, ಬ್ಲ್ಯಾಕ್ ಪೆಪ್ಪರ್ ಹಾಕಿ ಹುರಿಯಿರಿ. ಸ್ವಲ್ಪ ಉಪ್ಪು, ಬಳಿಕ ಸೋಯಾ ಸಾಸ್, ಮತ್ತು ಅರ್ಧ ಸ್ಪೂನ್ ಕಾರ್ನ್ ಫ್ಲೋರ್ ಸ್ವಲ್ಪ ನೀರಲ್ಲಿ ಹಾಕಿ ಮಿಕ್ಸ್ ಮಾಡಿ, ಅದನ್ನು ಸೇರಿಸಿ. ನಂತರ ಶಾಲೋ ಫ್ರೈ ಮಾಡಿದ ಪನೀರ್, ಸ್ವಲ್ಪ ಎಳ್ಳು ಹಾಕಿ ಮಿಕ್ಸ್ ಮಾಡಿದ್ರೆ ಪನೀರ್ ಪೆಪ್ಪರ್ ಫ್ರೈ ರೆಡಿ.




