Hassan News: ಹಾಸನ: ತಾಲೂಕಿನಲ್ಲಿರುವ ಎಲ್ಲಾ ಬಾರುಗಳ ಮೇಲೆ ಬೆಳಿಗ್ಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ನೋಡಿ ಅಧಿಕಾರಿಗಳು ದಿಗ್ಬ್ರಮೆಗೊಂಡ ಘಟನೆ ನಡೆದಿದೆ.
ಮೊನ್ನೆ ನಡೆದ ತಾಲೂಕಿನ ಎಲ್ಲಾ ಅಧಿಕಾರಿಗಳ ಸಭೆಯಲ್ಲಿ ಸಿ ಎಲ್ 7 ಸಿ ಎಲ್ 2 ನಲ್ಲಿ ಅಬಕಾರಿ ನಿಯಮ ಮೀರಿ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೇ ಹಳ್ಳಿಗಳ ಸಣ್ಣ ಪುಟ್ಟ ದಿನಸಿ ಅಂಗಡಿಗಳಲ್ಲಿ ರಾಜಾ ರೋಷವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಮದ್ಯದ ಅಂಗಡಿಗಳ ಮಾಲೀಕರು ಅವರಿಗೆ ನಿಯಮ ಮೀರಿ ಮದ್ಯವನ್ನು ಕೊಡುತ್ತಿದ್ದಾರೆ. ಅಂತಹ ಮದ್ಯದ ಅಂಗಡಿಗಳ ಮೇಲೆ ಬೇಲೂರು, ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ತಾಲೂಕಿನಲ್ಲಿರುವ ಎಲ್ಲಾ ಬಾರುಗಳ ಮೇಲೆ ಬೆಳಿಗ್ಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ದಿಗ್ಬ್ರಮೆಗೊಂಡ ಘಟನೆ ನಡೆದಿದೆ. ನಂತರ ಅಬಕಾರಿ ನಿರೀಕ್ಷಾ ಅಧಿಕಾರಿ ಚಂದನ ಮಾತನಾಡಿ ಮೊನ್ನೆ ನಡೆದ ತಾಲೂಕಿನ ಎಲ್ಲಾ ಅಧಿಕಾರಿಗಳ ಸಭೆಯಲ್ಲಿ ಸಿ ಎಲ್ 7 ಸಿ ಎಲ್ 2 ನಲ್ಲಿ ಅಬಕಾರಿ ನಿಯಮ ಮೀರಿ ವಹಿವಾತು ನಡೆಸುತ್ತಿದ್ದು, ಅಲ್ಲದೆ ಹಳ್ಳಿಗಳ ಸಣ್ಣ ಪುಟ್ಟ ದಿನಸಿ ಅಂಗಡಿಗಳಲ್ಲಿ ರಾಜಾ ರೋಷವಾಗಿ ವ್ಯಾಪಾರ ನಡೆಸುತ್ತಿದ್ದಾರೆ.
ಇದಕೆಲ್ಲ ಕಾರಣ ಮದ್ಯದ ಅಂಗಡಿಗಳ ಮಾಲೀಕರು ಅವರಿಗೆ ನಿಯಮ ಮೀರಿ ಮದ್ಯವನ್ನು ಕೊಡುತ್ತಿದ್ದಾರೆ, ಅಂತಹ ಮದ್ಯದ ಅಂಗಡಿಗಳ ಲೈಸನ್ಸ್ ರದ್ದು ಪಡಿಸಬೇಕೆಂದು ಸೂಚನೆ ಹಿನ್ನಲೆ ಇಂದು ಎಲ್ಲಾ ಬಾರುಗಳ ಭೇಟಿ ನೀಡಿದ್ದು ಕೆಲ ಬಾರುಗಳಲ್ಲಿ ಸ್ವಚ್ಛತ್ವ ಇಲ್ಲದೆ ಇರುವುದು ಕಂಡುಬಂದಿದ್ದು, ಅಬಕಾರಿ ನಿಯಮ ಮೀರಿ ಮಧ್ಯವನ್ನು ಕೊಡುತ್ತಿದ್ದು ಇದರಿಂದ ಎಂ ಎಸ್ ಎಲ್ ಗಳ ವ್ಯಾಪಾರ ನಿಯಮ ಮೀರುತ್ತಿದ್ದಾರೆ, ಅಂತ ಬಾರುಗಳಿಗೆ ಸೂಚನೆ ನೀಡದೆ ಲೈಸನ್ಸ್ ರದ್ದು ಪಡಿಸಲಾಗುತ್ತದೆ, ಎಂದರು.
ಅಬಕಾರಿ ಸಬ್ ಇನ್ಸ್ಪೆಕ್ಟರ್ ರಂಜಿತ್ ಮದ್ಯದ ಅಂಗಡಿಗಳಲ್ಲಿ ರೂಮಿನಲ್ಲಿ ಕುಳಿತ ಮಧ್ಯಪ್ರಿಯರು ಊಟ ಅಥವಾ ಇನ್ನಿತರ ತಿಂಡಿಗಳನ್ನು ಪಡೆದರೆ ಮಾತ್ರ ಕುಳಿತುಕೊಳ್ಳಲು ಅವಕಾಶ ಕೊಡಬೇಕು, ಹಳ್ಳಿಗಳಿಂದ ಬರುವ ಜನರಿಗೆ ಅಥವಾ ಬೇರೆ ಯಾರೇ ಬಂದರೂ ಅವರಿಗೆ ಹೊರಗಡೆ ಮಧ್ಯವನ್ನು ಕೊಡಬಾರದು, ಅಬಕಾರಿ ನಿಯಮವನ್ನು ತಿಳಿಸಬೇಕು ಅಲ್ಲದೆ ಎಲ್ಲದಕ್ಕೂ ಬಿಲ್ ಗಳನ್ನು ಹಾಕಬೇಕು, ನಿಯಮ ಮೀರಿದರೆ ಅವರ ಮೇಲೆ ಅಬಕಾರಿ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ಯನ್ನು ಬಾರುಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಇದೆ ಸಂದರ್ಭದಲ್ಲಿ ನಿಯಮ ಮೀರಿದ್ದ ಕೆಲ ಬಾರುಗಳ ಅಂಗಡಿಗಳನ್ನು ಮುಚ್ಚಿಸಲಾಯಿತು.
ಭಾರೀ ಗಾಳಿ ಮಳೆಗೆ ಕುಸಿದ ಮನೆಗಳು: ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ಪರಿಶೀಲನೆ.
ಬಿಬಿಎಂಪಿ ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ