Wednesday, October 23, 2024

Latest Posts

ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಬೇಕು ಅಂದ್ರೆ ಚಾಣಕ್ಯರು ಹೇಳಿದ ಮಾತನ್ನು ಕೇಳಿ

- Advertisement -

Spiritual: ಯಾರಿಗೆ ತಾನೇ ತಾನು ಶ್ರೀಮಂತರಾಗಬೇಕು, ತುಂಬಾ ದುಡ್ಡು ಹೊಂದಿರಬೇಕು, ಐಷಾರಾಮಿ ಜೀವನ ಮಾಡಬೇಕು ಅಂತಾ ಮನಸ್ಸಿರರುವುದಿಲ್ಲ ಹೇಳಿ..? ಆದ್ರೆ ಶ್ರೀಮಂತಿಕೆ ಅನ್ನೋದು ಎಲ್ಲರ ಹಣೆಬರಹದಲ್ಲಿ ಬರೆದಿರುವುದಿಲ್ಲ. ಅದಕ್ಕಾಗಿಯೇ ಚಾಣಕ್ಯರು ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಿಸಲು ಕೆಲವು ಟಿಪ್ಸ್ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಹಣ ಖರ್ಚು ಮಾಡುವ ಮುನ್ನ 10 ಬಾರಿ ಯೋಚಿಸಿ. ಈ ವಸ್ತು ತೆಗೆದುಕೊಳ್ಳುವುದು ನನಗೆ ಅನಿವಾರ್ಯವೇ..? ಇದಿಲ್ಲದಿದ್ದರೆ, ನಾನು ಬದುಕಲು, ಜೀವನ ನಡೆಸಲು ಸಾಧ್ಯವಿಲ್ಲವೇ..? ಎಂದು ಒಮ್ಮೆ ಯೋಚಿಸಬೇಕು. ಮನಸ್ಸಿನ ಖುಷಿಗಾಗಿ ಸಿಕ್ಕಿ ಸಿಕ್ಕಿದ್ದನ್ನು ಖರೀದಿಸಿದರೆ, ನೀವು ಶ್ರೀಮಂತರಾಗಲು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಬದುಕಲು, ಜೀವನ ನಡೆಸಲು ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಿ, ದುಡ್ಡಿದೆ ಎಂದು, ಇಷ್ಟಬಂದ ವಸ್‌ತುವನ್ನು ಖರೀದಿಸಿದರೆ, ಮುಂದೊಂದು ದಿನ ವಿಪತ್ತಿಗೆ ಬೇಕಾದ ಹಣವೂ ಇರುವುದಿಲ್ಲ.

ದುಡಿದ ಹಣದಲ್ಲಿ ಕೊಂಚ ದಾನ ಮಾಡಿರಿ. ದಾನ ಮಾಡಿ ದರಿದ್ರರಾಗಬೇಡಿ ಎಂಬ ಮಾತನ್ನು ಗಮನದಲ್ಲಿ ಇಟ್ಟುಕೊಂಡು, ನೀವು ದುಡಿದ ಹಣದಲ್ಲಿ ಕೊಂಚವೇ ಕೊಂಚ ಭಾಗವನ್ನು ದಾನಕ್ಕಾಗಿ ಮೀಸಲಿಡಿ. ಯಾಕಂದ್ರೆ ದಾನ ಮಾಡುವುದು ಪುಣ್ಯದ ಕೆಲಸ. ಇದರಿಂದ ನಿಮ್ಮ ಜೀವನ ಉತ್ತಮವಾಗಿರುತ್ತದೆ. ದಾನದ ಅವಶ್ಯಕತೆ ಇರುವವರಿಗಷ್ಟೇ ದಾನ ಮಾಡಿ. ನಿಮ್ಮ ದುಡಿಮೆಯಲ್ಲಿ ಅತೀ ಹೆಚ್ಚು ಭಾಗವನ್ನು ಉಳಿತಾಯಕ್ಕಾಗಿ, ಸ್ವಲ್ಪ ಭಾಗವನ್ನು ಮನೆ ಖರ್ಚಿಗಾಗಿ, ಉಳಿದಿದ್ದರಲ್ಲಿ ಕೊಂಚ ಭಾಗವನ್ನು ದಾನಕ್ಕಾಗಿ ಮೀಸಲಿಡಿ.

ಹಣವನ್ನು ಉಳಿತಾಯ ಮಾಡುವುದು ಎಷ್ಟು ಮುಖ್ಯವೋ, ಅವಶ್ಯಕ ಖರ್ಚಿಗಾಗಿ, ಧಾರ್ಮಿಕ ಕೆಲಸಕ್ಕಾಗಿ ಬಳಸುವುದು ಅಷ್ಟೇ ಮುಖ್ಯ. ಅದಕ್ಕಾಗಿಯೇ ಚಾಣಕ್ಯರು ಹಣವನ್ನು ನೀರಿಗೆ ಹೋಲಿಸಿದ್ದಾರೆ. ನೀರು ನಿಂತಲ್ಲೇ ನಿಂತರೆ, ಪಾಚಿಗಟ್ಟುತ್ತದೆ. ಮತ್ತು ಆ ನೀರು ಬಳಕೆಗೆ ಉತ್ತಮವಾಗಿರುವುದಿಲ್ಲ. ಅದೇ ರೀತಿ ಉಪಯೋಗಕ್ಕೆ ಬರದ ಹಣ, ಪಾಚಿಗಟ್ಟಿದ ನೀರಿನ ಹಾಗೆ. ಅವಶ್ಯಕತೆ ಇರುವ ಕೆಲಸ, ಧಾರ್ಮಿಕ ಕೆಲಸಕ್ಕಾಗಿ ಅದನ್ನು ಬಳಸಬೇಕು.

- Advertisement -

Latest Posts

Don't Miss