Tuesday, October 14, 2025

Latest Posts

ಲೋಕಸಭೆ ಚುನಾವಣೆಗೆ ಹಣ ಸಂಗ್ರಹ ಮಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ ..!

- Advertisement -

ರಾಯಚೂರು: ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಭಾರಿ ಮೊತ್ತದ ಹಣವನ್ನು ಕಲೆಹಾಕಿದ್ದು ಈ ವಿಚಾರವಾಗಿ ಇಂದು(ಅಕ್ಟೋಬರ್ 16) ಮಾಜಿ ಸಿಎಂ ಯಡಿಯೂರಪ್ಪ ರಾಯಚೂರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಐಟಿದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ನಡೆಸಬೇಕು. ಮುಂದಿನ ಚುನಾವಣೆಗೆ ಇಟ್ಟ ಹಣ ಎನ್ನುವ ಆರೋಪ ಕೇಳಿ ಬರುತ್ತಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಹೇಳಿಕೆ ನೀಡಿದರು.

ಇನ್ನು ಐಟಿ ದಾಳಿ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಪಂಚರಾಜ್ಯ ಚುನಾವಣೆಗೆ ಹಾಗೂ ಲೋಕಸಭೆ ಚುನಾವಣೆಗೆ ಸಾವಿರ ಕೋಟಿ ಹಣ ಸಂಗ್ರಹ ಮಾಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ ಎಂದು ಕೇಳಿದಾಗ ಜೋಷಿಯವರು ಹಿರಿಯರು ಸರ್ಕಾರದ ಹಣ ಸಂಗ್ರಹ ಮಾಡುವಲ್ಲಿ ಯಾವ ರೀತಿ ತೊಡಗಿದೆ ಅನ್ನೋದನ್ನ ಹೇಳಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರು ನಮ್ಮ ತಕರಾರಿಲ್ಲ ಜಾತಿಗಳ ಮಧ್ಯೆ ಸಂಘರ್ಷ ಬರಬಾರದು ಎನ್ನುವ ಉದ್ದೇಶದಿಂದ ಜಾತಿ ಗಣತಿ ಆಗಿರಲಿಲ್ಲ. ಸೂಕ್ತ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿ

ಇನ್ನು ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನವನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಹಾಗಾಗಿ ಚುನಾವಣೆ ಹಿನ್ನೆಲೆ ಓಡಾಡುತ್ತಿದ್ದೇನೆ. ಹಾಗೂ ಅತೀ ಶೀಘ್ರದಲ್ಲೆ ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕೆಎಸ್ಆರ್ಟಿಸಿ ಬಸ್ ಮನೆ ಜಖಂ

ಕಳ್ಳತನವಾಗಿದ್ದ ಮೊಬೈಲ್ ಫೋನ್ ನಿಂದ ಹಣ ವರ್ಗಾವಣೆ ದೂರು ದಾಖಲು….!

Indigo: ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೆ ವಾಪಸ್ ಬೆಂಗಳೂರಿಗೆ ಬಂದ ವಿಮಾನ: ಪ್ರಯಾಣಿಕರು ಕಂಗಾಲು

- Advertisement -

Latest Posts

Don't Miss