ಹುಬ್ಬಳ್ಳಿ: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆ ಇನ್ನೂ ನಾಲ್ಕರಿಂದ ಐದು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳ ಕಸರತ್ತು ಜೋರಾಗಿಯೇ ನಡೆದಿದೆ. ಓಡುವ ಕುದುರೆ ಕಟ್ಟಿ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಲು ಮುಂದಾಗಿದೆ.
ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕೈ ರಣತಂತ್ರ ರೂಪಿಸಲು ಮುಂದಾಗಿದೆ. ಎರಡೂ ಸೂತ್ರಗಳ ಮೇಲೆ ಲೋಕಸಭಾ ಚುನಾವಣೆಯನ್ನ ಎದುರಿಸಲು ಕಾಂಗ್ರೆಸ್ ಮುಂದಾಗಿದೆ. ಹೌದು ಒಂದು ಜಾತಿ ಲೆಕ್ಕಾಚಾರ, ಇನ್ನೊಂದು ಯುವಕರಿಗೆ ಟಿಕೇಟ್ ನೀಡಬೇಕೆಂಬ ಸೂತ್ರ ಅನುಸರಿಸಿ ಲೋಕಸಭಾ ಚುನಾವಣೆ ಗೆಲ್ಲಲು ಪ್ಲಾನ್ ಮಾಡಿದೆ. ಲಿಂಗಾಯತ ಮತ್ತು ಯುವಕರಿಗೆ ಟಿಕೇಟ್ ನೀಡಬೇಕೆಂಬ ಚಿಂತನೆ ನಡೆಸಿದ ಕಾಂಗ್ರೆಸ್, ಹೊಸ ಹೊಸ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.
ಇನ್ನು ಲಿಂಗಾಯತ ಮತಗಳು ಮತ್ತು ಯುವಕರ ಮತಗಳನ್ನು ಟಾರ್ಗೆಟ್ ಮಾಡಿರುವ ಕಾಂಗ್ರೇಸ್ ಪಕ್ಷ ಹಲವಾರು ತಂತ್ರಗಳ ಮೂಲಕ ಚುನಾವಣೆ ಎದುರಿಸಲು ಮುಂದಾಗಿದೆ. ಹಾಗಿದ್ದರೆ ಲೋಕಸಭಾ ಚುನಾವಣೆ ರಂಗು ಹೇಗಿರುತ್ತದೆ ಕಾದುನೋಡಬೇಕಿದೆ.
Cauvery Water : ಬೆಂಗಳೂರು ಬಂದ್ : ಟೌನ್ ಹಾಲ್ ಬಳಿ ಎಂದಿನಂತೆ ಜನ ಸಂಚಾರ
Cauvery Water : ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿರೋ ಸಂಘಟನೆಗಳು ಯಾವುವು ಗೊತ್ತಾ..?!