ಹೇಳಿ ಕೇಳಿ ಅಯೋಗ್ಯ ಸಿನಿಮಾ ನಿರ್ದೇಶಕ ಮಹೇಶ್ ಮಂಡ್ಯ ಹೈದ. ಮಂಡ್ಯದ ಗಂಡು ಅಂಬಿ ಹುಟ್ಟಿದ ಹಬ್ಬ ರ‍್ತಾರೆ ಇದೆ. ಅದೇ ದಿನ ಅಂದ್ರೆ ಮೇ ೨೯ಕ್ಕೆ ಮದಗಜ ಮಹೇಶ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಾರೆ. ಅದ್ರ ಜೊತೆ ಮತ್ತೊಂದು ಇಂಟರೆಷ್ಟಿAಗ್ ವಿಷ್ಯವನ್ನೂ ಹಂಚಿಕೊAಡಿದ್ದಾರೆ ಮಂಡ್ಯ ಮದಗಜ ಮಹೇಶ್. ಮಹೇಶ್ ಸೈಲೆಂಟಾಗಿ ಕೆಲಸ ಶುರುಮಾಡಿದ್ದಾರೆ. ಮೊದಲ ಸಿನಿಮಾ ಅಯೋಗ್ಯದಲ್ಲೇ ಸೂಪರ್‌ಹಿಟ್ ಕೊಟ್ಟ ಮಹೇಶ್ ಈಗ ಅಯೋಗ್ಯ ೨ ಸಿನಿಮಾವನ್ನ ಪ್ಲಾö್ಯನ್ ಮಾಡಿದ್ದಾರೆ.
ಹಾಗಂತ ೨೯ಕ್ಕೆ ಅನೌನ್ಸ್ ಮಾಡೋ ಸಿನಿಮಾ ಅದೇನಾ ಅಂದ್ರೆ ಅದಲ್ಲ, ಅದು ಬೇರೆ ಸಿನಿಮಾ. ಕುತೂಹಲ ಸದ್ಯಕ್ಕೆ ಹಾಗೇ ಇರಲಿ. ಆದರೆ ಒಂದAತೂ ಕನ್ಫರ್ಮ್ ಇದು ಅಂಬಿ ಕುಟುಂಬಕ್ಕೆ ಸಂಬAಧಪಟ್ಟ ವಿಚಾರ ಅನ್ನೋದು.
ಯೋಗರಾಜ್ ಭಟ್ಟರ ಜೊತೆ ೯ ವರ್ಷ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಮಹೇಶ್ ಗುರುಗಳಿಂದ ಕಲಿತಿದ್ದೇನು ಅಂದ್ರೆ ಆರೋಗ್ಯ ಅಂತಾರೆ. ಈಗ ಯೋಗರಾಜಭಟ್ಟರು ನಿತ್ಯ ಯೋಗ ಮಾಡ್ತಾರೆ. ನಿಜವಾದ ಯೋಗರಾಜ ಭಟ್ಟರಾಗಿದ್ದಾರೆ ಅಂದ್ರು. ಯಾಕೆ ಹಂಗAದ್ರು, ಕೆಜಿಎಫ್ ಅನ್ನೋ ಮಹಾನ್ ಸಿನಿಮಾದ ಸಾಧಕ ರಾಕಿಭಾಯ್ ಬಗ್ಗೆ ಮಾತನಾಡ್ತಾ ನಾನು ಹೀರೋ ಆಗೋಕೆ ಬಂದವನಲ್ಲ, ನಂಬರ್ ೧ ಹೀರೋ ಆಗೋಕೆ ಬಂದವನು ಅಂತ ರಾಕಿಭಾಯ್ ಹೇಳಿದ್ದರು ಅಂತ ನೆನಪಿಸಿಕೊಂಡ ಮಹೇಶ್ ಪ್ರಶಾಂತ್ ನೀಲ್ ಬಗ್ಗೆ ಮಾತನಾಡಿದ್ದಾರೆ.
ರಾಬರ್ಟ್ ಸಿನಿಮಾದ ಪ್ರಚಾರದ ವೇಳೆ ಚಾಲೆಂಜಿAಗ್‌ಸ್ಟಾರ್ ದರ್ಶನ್ ಮಹೇಶ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ರು, ಹಾಗಾದ್ರೆ ಚಾಲೆಂಜಿAಗ್‌ಸ್ಟಾರ್ ಅವರಲ್ಲಿ ಮಹೇಶ್ ಮೆಚ್ಚಿಕೊಂಡ ಗುಣ ಯಾವ್ದು..? ಹೀಗೆ ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡಿದ್ದಾರೆ. ತಮ್ಮ ಬಗ್ಗೆ ಇತ್ತೀಚೆಗೆ ಕೇಳಿ ಬಂದ ಅಪಹಾಸ್ಯದ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ ಅಯೋಗ್ಯ ನಿರ್ದೇಶಕ. ಈ ಎಲ್ಲಾ ಇಂಟರೆಷ್ಟಿAಗ್ ವಿಷಯಗಳನ್ನು ತಿಳಿದುಕೊಳ್ಳೋಕೆ ನೀವು ಕರ್ನಾಟಕ ಟಿವಿ ಯೂಟ್ಯೂಬ್ ಚಾನಲ್‌ನಲ್ಲಿ ಪೂರ್ತಿ ವಿಡಿಯೋ ನೋಡಿ..!
ಓಂ
ಕರ್ನಾಟಕ ಟಿವಿ