- Advertisement -
Maharashtra: ಶಿಕ್ಷಕ ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಸ್ಪೋಟವಾಗಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಾಲೂಕಿನ ಸಿರೆಗಾಂವ್ ಆಣೆಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಸುರೇಶ್ ಸಂಗ್ರಾಮೆ (55) ಎಂಬುವವರು ಸಾವನ್ನಪಿದ್ದಾರೆ. ಇವರ ಅಕ್ಕ ಪಕ್ಕದಲ್ಲಿ ಇನ್ನೂ ಇಬ್ಬರು ಇದ್ದು, ಅವರಿಬ್ಬರಿಗೂ ಗಂಭೀರ ಗಾಯವಾಗಿ, ಸ್ಥಳೀಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಸಂಜೆ ವೇಳೆ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ, ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡಿದೆ. ಆದರೆ ಇದುವರೆಗೂ ಮೊಬೈಲ್ ಏಕೆ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿಲ್ಲ. ಮೊಬೈಲ್ ಬ್ಯಾಟರಿ ಉಬ್ಬಿಕೊಂಡು ಸ್ಪೋಟವಾಗಬಹುದು. ಅಥವಾ ಬೇರೆಯವರ ಮೊಬೈಲ್ ಚಾರ್ಜರ್ ಬಳಸಿದಾಗಲೂ ಹೀಗೆ ಸ್ಪೋಟವಾಾಗುವ ಸಾಧ್ಯತೆ ಇರುತ್ತದೆ.
- Advertisement -