ಶಿವಮೊಗ್ಗ ಗಲಭೆ ವಿಚಾರ ಇದೀಗ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಪಕ್ಷ ಇದ್ದಾಗ ಇಂತಹ ಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ರೀತಿಯ ಕೃತ್ಯ ಮಾಡುವವರಿಗೆ ಜೈಲಿನ ಹಕ್ಕಿ ಹೊರ ಬಂದಂತ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಲಭೆ ಮಾಡ್ತಾರೆ ಅಂದ್ರೆ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡ್ತಾ ಇತ್ತು? ಗಲಭೆಗೆ ಪ್ರಚೋದನೆ ಮಾಡಿದವರನ್ನು ಬಂಧಿಸುವ ಕೆಲಸ ಮಾಡ್ಬೇಕು. ಮುಂದೆ ಈ ರೀತಿ ಆಗದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಬಿಜೆಪಿ ಬ್ಯಾನ್ ಮಾಡಿದ ಸಂಘಟನೆಗಳು ಬೇರೆ ಮುಖವಾಡ ಹಾಕಿಕೊಂಡು ಬಂದಿವೆ. ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳದೆ ಹೋದ್ರೆ ಬೇರೆ ಜಿಲ್ಲೆಗಳಲ್ಲೂ ಹೀಗೆ ಮಾಡ್ತಾರೆ. ಅಲ್ಪ ಸಂಖ್ಯಾತರ ತುಷ್ಟಿಕರಣ ಸರ್ಕಾರ ಮಾಡ್ತಿರೋದಕ್ಕೆ ಇಂತಹ ಘಟನೆಗಳು ನಡೀತಾ ಇವೆ ಎಂಬುವುದಾಗಿ ಹೇಳಿಕೆಯನ್ನು ಕೊಟ್ಟಿದ್ದಾರೆ.
ಮತ್ತು ಇಷ್ಟು ದೊಡ್ಡ ಗಲಾಟೆಯಾಗಿದ್ದರು ಗುಪ್ತಚರ ಇಲಾಖೆಯ ಏನು ಮಾಡುತ್ತಿತ್ತು. ಗುಪ್ತಚರ ಇಲಾಖೆ ಸಂಪೂರ್ಣ ಫೇಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಎನ್ನುವಂತಾಗಿದೆ.ಅಲ್ಪ ಅಸಂಖ್ಯಾತರ ತುಷ್ಟಿಕರಣದಿಂದ ಈ ಪರಿಸ್ಥಿತಿ ಬಂದಿದೆ.
ನಮಗೆ ಹೇಳೋರು ಇಲ್ಲ ಕೇಳೋರು ಇಲ್ಲ ಅಂತ ಅವರಿಗೆ ಅನ್ನಿಸಿದೆ. ನಿಷೇಧಿತ ಸಂಘಟನೆಗಳು ಮುಖವಾಡ ಧರಿಸಿಕೊಂಡು ಈ ರೀತಿಯ ಕೃತ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಮಾಡಲು ಇವರು ಶುರು ಮಾಡುತ್ತಾರೆ. ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡುವ ವರ್ತನೆ. ಕಾಂಗ್ರೆಸ್ ತುಷ್ಟಿಕರಣದಿಂದ ಈ ರೀತಿಯಲ್ಲಿ ಘಟನೆಗಳು ನಡೆಯುತ್ತಿವೆ. ಹುಬ್ಬಳ್ಳಿ ಗಲಭೆಯವರನ್ನು ಬಿಡಿಸುವ ಕಾರ್ಯಕ್ಕೆ ಕಾಂಗ್ರೆಸ್ ಅಧಿಕಾರ ಬಂದ ತಕ್ಷಣವೇ ಮಾಡಿದೆ. ಆದ್ರೆ ಇದು ಆಗ ಬಾರದು ಸರ್ಕಾರ ಯಾವುದೇ ಸಡಿಲ ನೀತಿ ಅನುಸರಿಸದೆ ಭದ್ರತೆ ನೀಡಬೇಕು. ಎಂದು ಹೇಳಿದ್ದಾರೆ.
ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸವದಿ
School : ಶಿರಗುಪ್ಪಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಲು ʼಬಣ್ಣದರ್ಪಣೆʼ ಅಭಿಯಾನ