International News: ಪ್ರಧಾನಿ ಮೋದಿಯವರು ಲಕ್ಷದ್ವೀಪದಲ್ಲಿ ವಿಹರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ಬಳಿಕ, ಮಾಲ್ಡೀವ್ಸ್ ಕೇಂದ್ರ ಸಚಿವರು, ಮೋದಿಯನ್ನು ಇಸ್ರೇಲ್ ಕೈಗೊಂಬೆ ಎಂದು ಟೀಕಿಸಿದ್ದರು. ಇದಾದ ಬಳಿಕ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಅಷ್ಟಕ್ಕಷ್ಟೇ ಇದೆ.
ಈ ಘಟನೆ ಬಳಿಕ, ಮಾಲ್ಡೀವ್ಸ್‌ಗೆ ಭಾರತ ಕಡೆಯಿಂದ ಕೋಟಿ ಕೋಟಿ ಲಾಸ್ ಆಗಿದ್ದು, ಮಾಲ್ಡೀವ್ಸ್ ಪ್ರವಾಸಕ್ಕಾಗಿ ಫ್ಲೈಟ್ ಟಿಕೇಟ್, ರೂಮ್ ಬುಕ್ ಮಾಡಿದವರೆಲ್ಲ ಕ್ಯಾನ್ಸಲ್ ಮಾಡಿದ್ದಾರೆ. ಅಲ್ಲದೇ, ಮಾಲ್ಡೀವ್ಸ್ ಅಧ್ಯಕ್ಷ ಕೂಡ, ಮಾಲ್ಡೀವ್ಸ್ ಭಾರತೀಯ ಸೇನೆಯನ್ನು ಹಿಂದೆಗೆದುಕೊಳ್ಳಿ ಎಂದು ತಾಕೀತು ಮಾಡಿದ್ದಾನೆ. ಇದೀಗ ಮಾಲ್ಡೀವ್ಸ್ ಸರ್ಕಾರದ ತಪ್‌ಪು ನಿರ್ಧಾರದಿಂದ 14 ವರ್ಷದ ಬಾಲಕನ ಪ್ರಾಣ ಹೋಗಿದೆ.
ಈ ಬಾಲಕನಿಗೆ ತುರ್ತು ಪರಿಸ್ಥಿತಿ ಇದ್ದ ಕಾರಣ, ಚಿಕಿತ್ಸೆಗೆ ಕರೆದೊಯ್ಯಲು ಭಾರತದ ವಿಮಾನದ ಅಗತ್ಯವಿತ್ತು. ಆದರೆ ಮಾಲ್ಡೀವ್ಸ್ ಸರ್ಕಾರ ಇದಕ್ಕೆ ಅನುಮತಿ ಕೊಡದ ಕಾರಣ, ಮಗುವನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಗದೇ, ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನಿಗೆ ಬ್ರೇನ್ ಟ್ಯೂಮರ್ ಮತ್ತು ಸ್ಟ್ರೋಕ್ ಇತ್ತು. ಈ ಕಾರಣಕ್ಕೆ ಏರ್ ಆ್ಯಬುಲೆನ್ಸ್ ಮೂಲಕ, ಮಾಲೆಗೆ ಕರೆದೊಯ್ಯಲು, ಬಾಲಕನ ಅಪ್ಪ ಅನುಮತಿ ಕೇಳಿದ್ದರು. ಆದರೆ ಬಾಲಕನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.
ವಿಶೇಷ ವಿಮಾನದಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ಹೊರಟ ಮಾಜಿ ಪ್ರಧಾನಿಗಳ ಕುಟುಂಬ
ಚೆನ್ನೈನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ