Thursday, October 23, 2025

Latest Posts

ಕ್ರಿಕೇಟ್ ಆಡುವಾಗ ತಲೆಗೆ ಬಾಲ್ ತಾಗಿ ವ್ಯಕ್ತಿ ಸಾವು

- Advertisement -

Cricket News: ಕ್ರಿಕೇಟ್ ಆಡುವಾಗ ಬಾಲ್ ತಲೆಗೆ ತಾಗಿ ವ್ಯಕ್ತಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಜಯೇಶ್ ಚುನ್ನಿಲಾಲ್ (52) ಎಂಬ ಉದ್ಯಮಿ ಮೃತಪಟ್ಟಿದ್ದು, ಇವರು ಭಯಂದರ್‌ನ ನಿವಾಸಿಯಾಗಿದ್ದಾರೆ.

ಸೋಮವಾರದ ದಿನ ಸಂಜೆ ಮುಂಬೈನಲ್ಲಿ, ಕಚ್ಚಿ ಸಮುದಾಯದವರು ಮಾಟುಂಗಾ ಮೈದಾನದಲ್ಲಿ ಹಿರಿಯರ ಟಿ20 ಕ್ರಿಕೇಟ್ ಮ್ಯಾಚ್ ನಡೆಸಲಾಗಿದ್ದು. ಈ ವೇಳೆ ಮ್ಯಾಾಚ್‌ನಲ್ಲಿ ಜಯೇಶ್ ಭಾಗವಹಿಸಿದ್ದರು. ಈ ಮೈದಾನದಲ್ಲಿ ಎರಡು ತಂಡಗಳ ಕ್ರಿಕೇಟ್ ಪಂದ್ಯಾವಳಿ ನಡೆಯುತ್ತಿತ್ತು. ಜಯೇಶ್ ತನ್ನ ತಂಡಕ್ಕಾಗಿ ಫೀಲ್ಡೀಂಗ್ ಮಾಡುತ್ತಿದ್ದರು.

ಈ ವೇಳೆ ಇನ್ನೊಂದು ತಂಡದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದವ ಬಾಟ್ ಬೀಸಿದಾಗ, ಆ ಬಾಲ್ ಬಂದು, ಜಯೇಶ್ ತಲೆಗೆ ತಾಗಿದೆ. ಈ ವೇಳೆ ಜಯೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಜಯೇಶ್ ಅದಾಗಲೇ ಮೃತಪಟ್ಟಿದ್ದರು.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ನನಗೆ ಆರ್ಸಿಬಿ ಪರ ಆಡಲು ಇಷ್ಟವಿಲ್ಲದಿದ್ದರೂ ಬ್ಲಾಕ್ಮೇಲ್ ಮಾಡಿ ಆಡಿಸಿದರು: ಪ್ರವೀಣ್ ಕುಮಾರ್

ಕ್ರಿಕೇಟಿಗ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ

ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್

- Advertisement -

Latest Posts

Don't Miss