Tuesday, July 16, 2024

Latest Posts

ಹೊಟ್ಟೆಯಲ್ಲಿ 246 ಪ್ಯಾಕೆಟ್ ಡ್ರಗ್ಸ್- ವಿಮಾನದಲ್ಲಿಯೇ ಪ್ರಾಣಬಿಟ್ಟ ವ್ಯಕ್ತಿ…!

- Advertisement -

ಮೆಕ್ಸಿಕೋ: ನೂರಾರು ಡ್ರಗ್ಸ್ ಪ್ಯಾಕೆಟ್ ಗಳನ್ನು ಸಾಗಿಸೋ ಸಲುವಾಗಿ ಅವುಗಳನ್ನು ನುಂಗಿದ್ದ ವ್ಯಕ್ತಿ ವಿಮಾನದಲ್ಲಿಯೇ ಪ್ರಾಣಬಿಟ್ಟಿದ್ದಾನೆ.

ಈ ಘಟನೆ ಮೆಕ್ಸಿಕೋ ಸಿಟಿಯಲ್ಲಿ ನೆಡೆದಿದ್ದು, ಮೆಕ್ಸಿಕೋದಿಂದ ಜಪಾನ್ ಗೆ ಪ್ರಯಾಣಿಸುತ್ತಿದ್ದ ಜಪಾನ್ ಮೂಲದ ವ್ಯಕ್ತಿ ವಮೃತಪಟ್ಟಿದ್ದಾನೆ. ವಿಮಾನ ಟೇಕಾಫ್ ಆಗಿ ಕೆಲ ಹೊತ್ತಿನಲ್ಲೆ ವ್ಯಕ್ತಿಯು ನರಳಾಡುತ್ತಿದ್ದನ್ನು ಗಮನಿಸಿದ ಸಿಬ್ಬಂದಿ, ಕೂಡಲೆ  ಆತನ ಬಳಿ ಹೋಗಿ ವಿಚಾರಿಸಿದ್ದಾರೆ. ಆದಕ್ಕೆ ಆತ ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆತ ತೀವ್ರ ಅಸ್ವಸ್ಥಗೊಂಡಿದ್ದರಿಂದ ವಿಮಾನವನ್ನು ಸೋನೋರಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆತ ಆಸ್ಪತ್ರೆಗೆ ಸೇರಿಸೋ ಮುನ್ನವೇ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಪೋಸ್ಟ್ ಮಾರ್ಟಂ ಮಾಡುತ್ತಿದ್ದ ವೈದ್ಯರಿಗೆ ಮೃತನ ಹೊಟ್ಟೆಯಲ್ಲಿ ಸುಮಾರು ಮುಕ್ಕಾಲು ಇಂಚಿನ 246 ಪ್ಯಾಕೆಟ್ ಡ್ರಗ್ಸ್(ಕೋಕೇನ್) ಇದ್ದದ್ದು ಪತ್ತೆಯಾಗಿವೆ. ಈ ಡ್ರಗ್ಸ್ ಪ್ಯಾಕೆಟ್ ಗಳು ವ್ಯಕ್ತಿಯ ಹೊಟ್ಟೆಯಲ್ಲೇ ಒಡೆದುಕೊಂಡಿದ್ದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಆತನ ದೇಹ ಸೇರಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಂದ ಹಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿ ಡ್ರಗ್ಸ್ ಸಾಗಾಣಿಕೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ.

ರಾಹುಲ್ ಸೋಲಿಗೆ ಈ ತಪ್ಪುಗಳೇ ಕಾರಣವಾ…?ತಿಳಿದುಕೊಳ್ಳೋದಕ್ಕೆ ಈ ಸ್ಟೋರಿ ನೋಡಿ.

https://www.youtube.com/watch?v=mcEhSo-oULk

- Advertisement -

Latest Posts

Don't Miss