Thursday, October 10, 2024

Latest Posts

ದಾಳಿ ಮಾಡಲು ಬಂದ ಕರಡಿಯ ನಾಲಗೆ ಕಚ್ಚಿ ಪ್ರಾಣ ಉಳಿಸಿಕೊಂಡ ವ್ಯಕ್ತಿ..!

- Advertisement -

ರಷ್ಯಾ: ಆತ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿದ್ದ. ಆದ್ರೆ ಎಲ್ಲಿಂದಲೋ ಬಂದ ಕರಡಿ ಆತನ ಮೇಲೆ ದಾಳಿ ಮಾಡಿಯೇ ಬಿಟ್ಟಿತು. ಇವತ್ತು ತನ್ನ ಕಥೆ ಮುಗೀತು ಅಂತ ಭರವಸೆ ಕಳೆದುಕೊಂಡ ವ್ಯಕ್ತಿ ಇನ್ನೇನು ಪ್ರಾಣ ಕಳೆದುಕೊಳ್ಳಬೇಕೆನ್ನುವಷ್ಟರಲ್ಲಿ ಕರಡಿ ಆತನಿಂದ ತಾನೇ ತಪ್ಪಿಸಿಕೊಂಡು ಓಡಿಹೋಗಿತ್ತು.

ರಷ್ಯಾ ದೇಶದ ಟುವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಕೋಲೆ ಇರ್ಗಿಟ್ ಪಕ್ಕದಲ್ಲೇ ಇರೋ ಅರಣ್ಯ ಪ್ರದೇಶವೊಂದರಲ್ಲಿ ಸಿಗುವ ಜಿಂಕೆಯ ಕೊಂಬುಗಳನ್ನು ಆರಿಸಿಕೊಳ್ಳಲು ಹೋಗಿದ್ದ. ಈ ವೇಳೆ ಏಕಾಏಕಿ ಆತನ ಮೇಲೆರಗಿದ ಕರಡಿ ಆತನ ತಲೆ ಹಾಗೂ ಮುಖದ ಮೇಲೆ ಪರಚಿದೆ. ಕರಡಿಯ ಮೊನಚಾದ ಉಗುರು ನಿಕೋಲೆ ಕಣ್ಣಿಗೆ ತಾಕಿದ್ದೇ ತಡ ಆತ ಜೀವವೇ ಹೋಯಿತು ಎಂದುಕೊಂಡಿದ್ದ. ಕೆಳಕ್ಕೆ ಬಿದ್ದು ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಆತನ ಮೈ ಕರಡಿಯ ಕೆನ್ನಾಲಿಗೆ ನೋಡಿ ಅಕ್ಷರಶಃ ತಣ್ಣಗಾಗಿಬಿಟ್ಟಿದ್ದ. ಆದ್ರೆ ಆತನ ಮುಖಕ್ಕೆ ಬಾಯಿ ಹಾಕಲು ಬಂದ ಸಂದರ್ಭದಲ್ಲಿ ಮತ್ತಷ್ಟು ಗಾಬರಿಗೊಂಡ ಆತ ಕರಡಿಯ ನಾಲಗೆಯನ್ನೇ ಕಚ್ಚಿಬಿಟ್ಚಿದ್ದಾನೆ. ಇದರಿಂದ ಬೆದರಿದ ಕರಡಿ ಅಲ್ಲಿಂದ ಕಾಲ್ಕಿತ್ತಿದೆ. ಈ ಮೂಲಕ ಬಡಪಾಯಿ ನಿಕೋಲೆ ಜೀವ ಉಳಿದಿದೆ.

ಇನ್ನು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ನಿಕೋಲೆ, ತಾನು ಉದ್ದೇಶಪೂರ್ವಕವಾಗಿ ಕರಡಿಯ ನಾಲಗೆ ಕಡಿದಿಲ್ಲ. ಪ್ರಾಣಭಯದಿಂದ ಒದ್ದಾಡುತ್ತಿದ್ದ ನಾನು ಕರಡಿಯ ಜೊತೆ ಸೆಣಸಾಡುತ್ತಿದ್ದ ಸಮಯದಲ್ಲಿ ನನ್ನ ಬಾಯಲ್ಲಿ ಯಾವುದೋ ವಸ್ತು ಇದೆ ಅಂತ ತಿಳಿಯಿತು, ಮೊದಲಿಗೆ ಅದು ನನ್ನ ನಾಲಗೆ ಅಂತ ತಿಳಿದಿದ್ದೆ. ಬಳಿಕ ಕರಡಿ ಅಲ್ಲಿಂದ ಕಾಲ್ಕಿತ್ತ ಮೇಲೆ ಅದು ಕರಡಿಯ ನಾಲಗೆ ಅಂತ ಗೊತ್ತಾಯಿತು ಅಂತ ಹೇಳಿದ್ದಾನೆ. ಇನ್ನು ಕರಡಿ ದಾಳಿಯಿಂದ ನಿಕೋಲೆಯ ಎಡಗಣ್ಣಿಗೆ ಹಾನಿಯಾಗಿದೆ.

ಮೋದಿ ಧ್ಯಾನ ಮಾಡಿದ್ದ ಆ ಗುಹೆಗೆ ಇದೀ ಸಿಕ್ಕಾಪಟ್ಟೆ ಡಿಮ್ಯಾಂಡ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=mqkuBKSmeK8

- Advertisement -

Latest Posts

Don't Miss