www.karnatakatv.net :ಬೆಳಗಾವಿ: ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮದ ಲಕ್ಷ್ಮಣ ಇಳಗೇರಿ ಎಂಬುವ ವ್ಯಕ್ತಿ ಸಾಲಗಾರರ ಕಾಟ ತಾಳಲಾರದೆ ಫೇಸ್ ಬುಕ್ ಲೈವ್ ಬಂದು ತನಗೆ ಕಿರುಕಳ ಕೊಟ್ಟ ವ್ಯಕ್ತಿಗಳ ಹೆಸರು ಹೇಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ಲಕ್ಷ್ಮಣ ಇಳಗೇರಿ ಗೋಕಾಕ್ ನ ಅರುಣ ಪವಾರ,ಅಶೋಕ ಅಂಕಲಗಿ, ಯಲ್ಲಪ್ಪ ಗಸ್ತಿ ಎನ್ನುವರ ಬಳಿ ವ್ಯವಹಾರ ಒಂದನ್ನು ಮಾಡಿದ್ದಾನೆ ಇದೆ ವ್ಯವಹಾರಕ್ಕೆ ಸಂಬದಿಸಿದಂತೆ ಲಕ್ಷ್ಮಣನ ಟ್ರ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ ಅಂತೆ, ಇದೆ ವಿಷಯಕ್ಕೆ ಕಿರುಕಳ ನೀಡಿದ್ದಾರೆ ಎಂದು ಲಕ್ಶ್ಮಣ ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆರೋಪಿತರಾದ ಅರುಣ ಪವಾರ,ಅಶೋಕ ಅಂಕಲಗಿ, ಯಲ್ಲಪ್ಪ ಗಸ್ತಿ ಬೆದರಿಕೆ ಹಾಕಿದ್ದು ಮುಂದಿನ ದಿನಗಳಲ್ಲಿ ಹೊಲ ಮನೆ ಕೂಡ ಮಾರಿಸುವುದಾಗಿ ಬೆದರಿಸಿದ್ದರಿಂದ ಈ ನಿರ್ಧಾರ ಎಂದು ವಿಡಿಯೋದಲ್ಲಿ ಲಕ್ಷ್ಮಣ ಅಳಲು ತೋಡಿಕೊಂಡಿದ್ದಾನೆ.
ಒಮ್ಮೆ 25ಸಾವಿರ ಹಾಗೂ 1ಲಕ್ಷದವರೆಗೆ ಹಣ ಕಟ್ಟಿರುವ ಲಕ್ಷ್ಮಣ ಆದರೂ ಇನ್ನೂ 3.5ಲಕ್ಷ ರೂಪಾಯಿ ಪಾವತಿಸದಿದ್ದರೆ ನಿನ್ನ ಹೋಲ ಮನೆ ಮಾರಿಸ್ತೀನಿ, ಹೆಂಡತಿ ಮಕ್ಕಳನ್ನ ಬಿಡೋದಿಲ್ಲ ಎಂದು ದಮ್ಕಿ ಹಾಕಿದ್ದಾರೆ ಎಂದು ಹೇಳಲಾಗಿದೆ.
ಲೈವ್ ವಿಡಿಯೋ ಗಮನಿಸಿದ ಕುಟುಂಬಸ್ಥರಿಂದ ಲಕ್ಷ್ಮಣ ಇಳಿಗೇರ್ ರಕ್ಷಣೆ ಮಾಡಲಾಗಿದೆ ಸದ್ಯ ಗೋಕಾಕ್ ತಾಲೂಕಾ ಆಸ್ಪತ್ರೆಯಲ್ಲಿ ಲಕ್ಷ್ಮಣ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸರು ಮಾತ್ರ ಇದುವರೆಗೂ ಯಾವ ಕ್ರಮ ಕೂಡ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ – ಬೆಳಗಾವಿ