- Advertisement -
ಅಹಮದಾಬಾದ್: ಅಹಮದಾಬಾದ್ ನಲ್ಲಿ ವ್ಯಕ್ತಿಯೋರ್ವ ಕೈಹಿಡಿದ ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ್ದಾನೆ.
ಊಟ ಕೊಡಿಸೋದಾಗಿ ಹೇಳಿದ್ದ ಪತಿ ತನ್ನ 21ವರ್ಷದ ಪತ್ನಿಯನ್ನು ಹೋಟೆಲ್ ವೊಂದಕ್ಕೆ ಕರೆದೊಯ್ದಿದ್ದ. ಆದ್ರೆ ಅಲ್ಲಿ ಆತ ಸೋನು ಶರ್ಮಾ ಎಂಬ ವ್ಯಕ್ತಿಗೆ ತನ್ನ ಪತ್ನಿಯನ್ನು ಮಾರಾಟ ಮಾಡಿದ್ದಾನೆ. ಅಲ್ಲದೆ ಆತನಿಂದ 500ರೂಪಾಯಿಯನ್ನೂ ಪಡೆದಿದ್ದಾನೆ. ಇನ್ನು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ಯ ಸೋನು ಶರ್ಮಾ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆತನಿಂದ ತಪ್ಪಿಸಿಕೊಂಡ ಬಳಿಕ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಆಕೆಯ ಪತಿ ಹಾಗೂ ಆರೋಪಿ ಸೋನು ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
- Advertisement -