ಅವರು ಪೂನಂ ರಾಣಾ ದೆಹಲಿ ಮೂಲದ ೩೫ ವರ್ಷದ ಹೆಣ್ಣುಮಗಳು. ತೀವ್ರ ಹೊಟ್ಟೆನೋವಿನಿಂದ ಬಳಲ್ತಾ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸೇರಿಕೊಳ್ತಾರೆ. ಏಳು ವರ್ಷದ ಹಿಂದೆ, ಅಂದ್ರೆ ೨೦೧೫ರಲ್ಲಿ. ಅವರ ಪತಿ ಕೇರಳ ಮೂಲದ ರಾಜೇಶ್ ನಾಯರ್ ಕಾಳಜಿ ಮಾಡ್ತಾರೆ. ಆದರೆ ಹೊಟ್ಟೆ ನೋವು ವಾಸಿಯಾಗದೇ ೬ ವರ್ಷ ಏಳು ತಿಂಗಳು ಆಸ್ಪತ್ರೆಯಲ್ಲೇ, ಅದರಲ್ಲೂ ಐ.ಸಿ.ಯುನಲ್ಲೇ ಟ್ರೀಟ್‌ಮೆಂಟ್ ನೀಡ್ತಾರೆ. ಆದರೆ ಇದೇ ಮೇ ೨೪ರಂದು ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಕಳೆದುಕೊಳ್ತಾರೆ ಪೂನಂ ರಾಣಾ.
ಇಷ್ಟು ವರ್ಷದ ಆರೈಕೆಯ ಒಟ್ಟು ವೆಚ್ಛ ಆಗಿದ್ದೆಷ್ಟು ಅಂತ ಕೇಳಿದ್ರೆ ನೀಬು ಮೂರ್ಚೆ ಹೋಗೋದು ಕನ್ಫರ್ಮ್. ಬರೋಬ್ಬರಿ ೯ ಕೋಟಿ ೫೦ ಲಕ್ಷ ಬಿಲ್ ಮಾಡುತ್ತೆ ಆಸ್ಪತ್ರೆ. ಆಸ್ಪತ್ರೆಯ ಈ ಬಿಲ್‌ನಲ್ಲಿ ೨ ಕೋಟಿಯನ್ನು ಸದ್ಯ ಪಾವತಿಸಿರುವ ಮಾಹಿತಿ ಬಂದಿದೆ. ಆದರೆ ಐ.ಸಿ.ಯುನಲ್ಲಿ ಒಂದೆರಡು ತಿಂಗಳು ಇದ್ದರೇ ಸಾಕಪ್ಪಾ ಸಾಕು ಅನ್ನೋರ ನಡುವೆ ಈ ೬ ವರ್ಷ ಇದ್ದವರ ಪರಿಸ್ಥಿತಿ ಏನಾಗಿರಬೇಡ ಯೋಚಿಸಿ.
ಒಂದು ಕಡೆ ಆಸ್ಪತ್ರೆಗಳು ಸಿಕ್ಕಾಪಟ್ಟೆ ದುಡ್ಡು ಸುಲಿಗೆ ಮಾಡ್ತವೆ ಅನ್ನೋದಾದ್ರೆ ಮತ್ತೊಂದು ಕಡೆ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಅಧೋಗತಿ. ಜನರು ಪ್ರೆöÊವೇಟ್‌ಗೆ ಹೋಗಂಗಿಲ್ಲ. ಗರ‍್ನಮೆಂಟ್‌ಗೂ ಹೋಗೋಕಾಗಲ್ಲ, ದುಡ್ಡಿದ್ದವರೇನೋ ಕೋಟೀನೂ ಕಟ್ತಾರೆ ಬಡವ ಏನ್ಮಾಡ್ಬೇಕು ಹೇಳಿ..?
ಓಂ, ಕರ್ನಾಟಕ ಟವಿ