Bollywood News: ಬಾಲಿವುಡ್ ಸೆಲೆಬ್ರಿಟಿಗಳು ಸೇರಿ ಇನ್ನು ಹಲವು ಗಣ್ಯರು, ಅನಂತ್ ಅಂಬಾನಿ ಮತ್ತು ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವನ್ನೇ ಧರೆಗಿಳಿಸಿದಂತೆ ಅಂಬಾನಿ ಮನೆತನದ ಕಾರ್ಯಕ್ರಮ ನೆರವೇರಿದೆ.
ಸೆಲೆಬ್ರಿಟಿಗಳು ಮೂರು ದಿನ ಮೂರು ರೀತಿಯ ಬಟ್ಟೆಗಳನ್ನು ಧರಿಸಿ, ಮಿರಮಿರ ಮಿಂಚಿದ್ದಾರೆ. ಒಬ್ಬೊಬ್ಬರು ಗಣ್ಯರು ತೊಟ್ಟ ಬಟ್ಟೆಗೆ ಒಂದೊಂದು ರೀತಿಯ ಸ್ಪೆಶಾಲಿಟಿ. ಅದೇ ರೀತಿ ಮಾರ್ಕ್ ಜ್ಯೂಕರ್‌ಬರ್ಗ್ ಕೂಡ ಭಾರತದ ಡಿಸೈನರ್ ಡಿಸೈನ್ ಮಾಡಿದ, ಚಿನ್ನದ ಬಟ್ಟೆ ಧರಿಸಿ, ಫುಲ್ ಶೈನ್ ಆಗಿದ್ದಾರೆ. ಚಿನ್ನ ಬಳಸಿ ತಯಾರಿಸಿದ ಶರ್ಟಿಗೆ, ಹುಲಿಯ ಡಿಸೈನ್ ಮಾಡಲಾಗಿದೆ.
ಬಿಲ್‌ಗೇಟ್ಸ್ ಕೂಡ ಮಾರ್ಕ್ ಶರ್ಟ್ ಸೂಪರ್ ಆಗಿದೆ ಅಂತಾ ಹೊಗಳಿದ್ದಾರೆ. ಯಾವಾಗ ನೋಡಿದರೂ ಒಂದೇ ರೀತಿಯ ಟೀ ಶರ್ಟ್ ಧರಿಸುವ ಮಾರ್ಕ್, ಈ ಬಾರಿ ಅಂಬಾನಿ ಮನೆತನದ ಕಾರ್ಯಕ್ರಮದಲ್ಲಿ , ಡಿಸೈನರ್ ಡಿಸೈನ್ ಮಾಡಿದ ಶರ್ಟ್ ಧರಿಸಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

