Sunday, September 8, 2024

Latest Posts

ಚರ್ಚ್ ಹೊರಗೆ ಗುಂಡಿನ ಸದ್ದು, ಒಳಗೆ ವಿವಾಹ: ಭಯದ ನಡುವೆ ಮದುವೆಯಾದ ಜೋಡಿ..

- Advertisement -

ಸದ್ಯ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಅದು ಉಕ್ರೇನ್ ಮತ್ತು ರಷ್ಯಾದ ಯುದ್ಧದ ಸುದ್ದಿ. ಉಕ್ರೇನ್‌ನಲ್ಲಿ ಸಾವು ನೋವು ಸಂಭವಿಸುತ್ತಿದ್ದು, ಇಡೀ ಪ್ರಪಂಚವೇ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂಥ ಸಂದರ್ಭದಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ವಿವಾಹ ಸಮಾರಂಭ ಏರ್ಪಟ್ಟಿದ್ದು, ಇಂಥ ಪರಿಸ್ಥಿತಿಯಲ್ಲೂ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಇಷ್ಟು ದಿನ ರಷ್ಯಾ ಪಡೆ ಉಕ್ರೇನ್ ರಾಜಧಾನಿ ಕೀವ್‌ ತಲುಪಿರಲಿಲ್ಲ. ಆದ್ರೆ ಇಂದು ಕೀವ್‌ನಲ್ಲೂ ಬಾಂಬ್ ದಾಳಿ ಮಾಡಲಾಗಿದೆ. ಆದ್ರೆ ಈ ದಾಳಿಗೂ ಮುನ್ನ, ಕೀವ್‌ ಕೌನ್ಸಿಲ್‌ನ ಡೆಪ್ಯೂಟಿ ಆಗಿರುವ ಅರಿವಾ(21) ಮತ್ತು ಸಾಫ್ಟವೇರ್ ಇಂಜಿನಿಯರ್ ಆಗಿರುವ ಫರ್ಸಿನ್ ವಿವಾಹವಾಗಿದ್ದಾರೆ.  ಮದುವೆಯಾಗೋಕ್ಕೆ ಇಷ್ಟು ಅರ್ಜೆಂಟೇನಿತ್ತು ಅನ್ನೋ ಪ್ರಶ್ನೆಗೆ ಉತ್ತರ, ಇವರು ಮೇನಲ್ಲಿ ರೆಸ್ಟೋರೆಂಟ್‌ ಒಂದರಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಆದ್ರೆ ಧಿಢೀರ್ ಅಂತ ರಷ್ಯಾ ದಾಳಿ ಶುರುವಾಗ ಕಾರಣ, ಭವಿಷ್ಯದ ಬಗ್ಗೆ ಚಿಂತಿಸಿದ ಈ ಜೋಡಿ, ಹೀಗೆ ಥಟ್ ಅಂತ ಮದುವೆಯಾಗೋ ನಿರ್ಧಾರ ಮಾಡಿದೆ. ಇನ್ನು ಈ ಕ್ಯೂಟ್ ಕಪಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅರಿವಾ, ಉಕ್ರೋನ್‌ನಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಆದರೆ ನಾವು ಇಂಥ ಕತ್ತಲೆಯ ಸಮಯದಲ್ಲೂ ಸಂತೋಷವನ್ನು ಕಂಡುಕೊಳ್ಳಬೇಕಿದೆ. ಹಾಗಾಗಿ ನಾವಿಬ್ರು, ಇಲ್ಲಿನ ಆರ್ಥೋಡಾಕ್ಸ್ ಚರ್ಚ್‌ನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಹೊರಗಡೆ ಬಾಂಬ್ ಶಬ್ಧ ಕೇಳುತ್ತಿದೆ. ಹಾಗಾಗಿ ಭವಿಷ್ಯ ಹೇಗಿರುತ್ತೆ ಗೊತ್ತಿಲ್ಲ. ಆ ಕಾರಣಕ್ಕೆ ನಾವು ಈಗಲೇ ವಿವಾಹವಾಗಿದ್ದೇವೆ ಎಂದು ಹೇಳಿದ್ದಾಳೆ.

ಒಟ್ಟಿನಲ್ಲಿ ಈ ಜೋಡಿ ನೂರು ಕಾಲ ಖುಷಿಯಾಗಿ ಬಾಳಲಿ, ಆದಷ್ಟು ಬೇಗ ಉಕ್ರೇನ್- ರಷ್ಯಾ ಯುದ್ಧ ಕೊನೆಗೊಳ್ಳಲ್ಲಿ. ಆ ಭೂಮಿಯಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.

- Advertisement -

Latest Posts

Don't Miss