- Advertisement -
ಭಾರತದಲ್ಲಿ (India) ಕೊರೋನಾ ವೈರಸ್ (corona virus) 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಭಾರತದಲ್ಲಿ ಇಂದು 13,166 ಮಂದಿಗೆ ಕೊರೋನಾವೈರಸ್ 24 ಗಂಟೆಗಳಲ್ಲಿ 302 ಸಾವು, 26,988 ಮಂದಿ ಗುಣಮುಖ ಕೊವಿಡ್-19 ಸಕ್ರಿಯ ಪ್ರಕರಣ ಸಂಖ್ಯೆ 1,34,235 ರಷ್ಟಿದೆ. ದೇಶದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.1.28ರಷ್ಟಾಗಿದೆ ಎಂದು ಆರೋಗ್ಯ ಸಚಿವಾಲಯ (Ministry of Health) ಮಾಹಿತಿ ನೀಡಿದೆ. ಕರ್ನಾಟಕ (karnataka) ರಾಜ್ಯದಲ್ಲಿ ಇಂದು 628 ಕೋವಿಡ್ ಪ್ರಕರಣ ದಾಖಲಾಗಿದ್ದು, 15 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 1349 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಒಟ್ಟು ಸಕ್ರಿಯ ಪ್ರಕರಣಗಳು 7518ರಷ್ಟಿದೆ. ರಾಜ್ಯದಲ್ಲಿ ದೈನಂದಿನ ಕೋವಿಡ್ ಪಾಸಿಟಿವಿಟಿ ದರ (Covid positivity rate) ಶೇ. 0.92ರಷ್ಟಿದೆ.
- Advertisement -