ತುಮಕೂರು: ಸುಳ್ಳು ಪ್ರಕರಣ ದಾಖಲಿಸಿದ್ದಲ್ಲದೆ ನನ್ನಿಂದ ಹಣ ಪಡೆದುಕೊಂಡಿದ್ದಾರೆ ಅಂತ ಮ್ಯಾಕ್ಸಿ ಕ್ಯಾಬ್ ಚಾಲಕನೊಬ್ಬ ಗುಬ್ಬಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.
ಹೌದು, ಮ್ಯಾಕ್ಸಿ ಕ್ಯಾಬ್ ಚಾಲಕ ಶಕೀಲ್ ಎಂಬಾತ ಗುಬ್ಬಿ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾನೆ. ಇನ್ನು ಆರೋಪಕ್ಕೆ ಕಾರಣವಾಗಿದ್ದು ಶವ ಸಾಗಿಸೋ ವಿಚಾರವಾಗಿ. ಹೌದು ಸೆ.02ರ ಬೆಳಗ್ಗೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಎಂ.ಎಚ್ ಪಟ್ಟಣ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ. ಅಲ್ಲಿಗೆ ಬಂದಿದ್ದ ಗುಬ್ಬಿ ಪೊಲೀಸರು ಶವವನ್ನ ಆಸ್ಪತ್ರೆಗೆ ಸಾಗಿಸೋ ಪ್ರಯತ್ನದಲ್ಲಿದ್ರು. ಆಗ ಅದೇ ಮಾರ್ಗವಾಗಿ ಮ್ಯಾಕ್ಸಿಕ್ಯಾಬ್ ನಲ್ಲಿ ತೆರಳುತ್ತಿದ್ದ ಶಕೀಲ್ ಗೆ ಶವವನ್ನ ಆಸ್ಪತ್ರೆಗೆ ಸಾಗಿಸಲು ಪೊಲೀಸ್ ಇನ್ಸ್ ಪೆಕ್ಟರ್ ಜ್ಞಾನಮೂರ್ತಿ ಹೇಳಿದ್ರಂತೆ. ಆದ್ರೆ ಇದಕ್ಕೆ ಒಪ್ಪದ ಶಕೀಲ್ ವಿರುದ್ಧ ಪೊಲೀಸರು ಕೋಪಗೊಂಡು ಆತನ ಮ್ಯಾಕ್ಸಿ ಕ್ಯಾಬ್ ವಶಕ್ಕೆ ಪಡೆದರಂತೆ. ಅಷ್ಟೇ ಅಲ್ಲದೆ ಶಕೀಲ್ ನಿಂದ 7 ಸಾವಿರ ರೂಪಾಯಿ ಹಣವನ್ನೂ ಕಟ್ಟಿಸಿಕೊಂಡಿದ್ದಾರಂತೆ. ಹೀಗಂತ ಆರೋಪ ಮಾಡ್ತಿರೋ ಚಾಲಕ ಶಕೀಲ್, ತಾನು ಪೊಲೀಸರಿಗೆ ಫೋನ್ ಪೇ ಮೂಲಕ ಹಣ ನೀಡಿರೋ ಬಗ್ಗೆಯೂ ದಾಖಲೆಯನ್ನೂ ನೀಡ್ತಿದ್ದಾನೆ.
ಆದ್ರೆ ಬಳಿಕ ಪೊಲೀಸರೇ 7 ಸಾವಿರ ರೂಪಾಯಿ ಹಣವನ್ನು ಮರುಪಾತಿಸಿದ್ರು. ಕಡೆಗೆ ತಾನು ಕೋರ್ಟ್ ನಲ್ಲಿ ದಂಡ ಕಟ್ಟಬೇಕಾಯ್ತು ಅಂತ ಶಕೀಲ್ ಪಿಎಸ್ಐ ಜ್ಞಾನಮೂರ್ತಿ ವಿರುದ್ಧ ಆರೋಪ ಮಾಡಿದ್ದಾನೆ.
ಇನ್ನು ಪಿಎಸ್ಐ ವಿನಾಃಕಾರಣ ಇಲ್ಲಸಲ್ಲದ ಆರೋಪ ಮಾಡಿ ಬಡ ಮ್ಯಾಕ್ಸಿಕ್ಯಾಬ್ ಚಾಲಕನ ಮೇಲೆ ಈ ರೀತಿ ದಬ್ಬಾಳಿಕೆ ಮಾಡಿದ್ದು ಸರೀನಾ ಅಂತ ಚಾಲಕರು ಹಾಗೂ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು