ಬೆಂಗಳೂರು: ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಮುಂಬೈ ಸೇರಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಲು ನಾಳೆ ಕಾಂಗ್ರೆಸ್ ನ ಟ್ರಬಲ್ ಶೂಟರ್ ಸಚಿವ ಡಿಕೆಶಿ ಭೇಟಿ ಮಾಡಲಿದ್ದಾರೆ.
ಅತೃಪ್ತರ ಶಾಸಕರಿಗೆ ಸಿದ್ದರಾಮಯ್ಯ ರಾಜೀನಾಮೆ ಹಿಂಪಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಮತ್ತೆ ಕಾಂಗ್ರೆಸ್ ಅತೃಪ್ತರ ಮನವೊಲಿಕೆಗೆ ಮುಂದಾಗಿದೆ. ಈ ನಿಟ್ಚಿನಲ್ಲಿ ಸಭೆ ನಡೆಸಿದ ದೋಸ್ತಿ ನಾಯಕರು ಸಚಿವ ಡಿ.ಕೆ ಶಿವಕುಮಾರ್ ರನ್ನು ರಾಜಿ ಸಂಧಾನಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ಹೀಗಾಗಿ ನಾಳೆ ಬೆಳಗ್ಗೆ 9.30ಕ್ಕೆ ಮುಂಬೈಗೆ ತೆರಳಲಿರುವ ಸಚಿವ ಡಿಕೆಶಿ ಅತೃಪ್ತ ಶಾಸಕರನ್ನು ಭೇಟಿಯಾಗಿ ಮನವೊಲಿಕೆ ಮಾಡಲಿದ್ದಾರೆ. ಡಿಕೆಶಿ ಜೊತೆ ಶಾಸಕ ಶಿವಲಿಂಗೇಗೌಡ ಸೇರಿದಂತೆ ಇತರೆ 4 ಮಂದಿ ಸಾಥ್ ನೀಡಲಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಕುಮಾರ್, ಮುಂಬೈನಲ್ಲಿರುವ ನನ್ನ ಸ್ನೇಹಿತರನ್ನು ಭೇಟಿ ಮಾಡಲಿದ್ದೇನೆ, ಅವರಿಗೆ ಸ್ವಲ್ಪ ತಿಳುವಳಿಕೆ ಹೇಳಿ ವೈಯಕ್ತಿಕವಾಗಿ ಮಾತನಾಡುವುದಿದೆ ಅಂತ ಹೇಳಿದ್ರು.
ಕೈ ಕೊಟ್ಟವರಿಗೆ ಸಿದ್ದು ಖಡಕ್ ಎಚ್ಚರಿಕೆ..! ಮಿಸ್ ಮಾಡದೇ ಈ ವಿಡಿಯೋ ನೋಡಿ