ಬೆಂಗಳೂರು: ಮುಂಬೈನಲ್ಲಿರೋ ಅತೃಪ್ತ ಶಾಸಕರೆಲ್ಲರೂ ನನ್ನ ಸ್ನೇಹಿತರು ಅವರಿಗೆ ತಿಳುವಳಿಕೆ ಹೇಳಿ ವೈಯಕ್ತಿಕವಾಗಿ ಮಾತನಾಡಿಕೊಂಡು ಬರ್ತೀನಿ ಅಂತ ಬಹಳ ಹುಮ್ಮಸ್ಸಿನಿಂದ ಮುಂಬೈಗೆ ತೆರಳಿದ್ದ ಸಚಿವ ಡಿಕೆಶಿ ಇದೀಗ ಬರಿಗೈಲಿ ವಾಪಸ್ಸಾಗಲಿದ್ದಾರೆ.
ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಅತೃಪ್ತರು ತಂಗಿದ್ದ ರಿನೈಸೆನ್ಸ್ ಹೋಟೆಲ್ ಒಳಕ್ಕೆ ಹೋಗಲು ಯತ್ನಸಿದ್ದ ಸಚಿವ ಡಿಕೆಶಿಗೆ ಮುಂಬೈ ಪೊಲೀಸರು ತಡೆಯೊಡ್ಡಿದ್ರು. ಅಲ್ಲದೆ ಅತೃಪ್ತರೂ ಸಹ ಯಾವುದೇ ಕಾರಣಕ್ಕೂ ಡಿಕೆಶಿಯವರನ್ನು ಒಳಕ್ಕೆ ಬಿಡಬೇಡಿ, ಅವರನ್ನು ಭೇಟಿ ಮಾಡಲು ನಮಗೆ ಇಷ್ಟವಿಲ್ಲ ಅಂತ ಪೊಲೀಸರಿಗೆ ಭದ್ರತೆ ಕೋರಿ ದೂರನ್ನೂ ನೀಡಿದ್ರು. ಈ ಹಿನ್ನೆಲೆಯಲ್ಲಿ ಡಿಕೆಶಿ ಎಷ್ಟೇ ಪ್ರಯತ್ನ ಮಾಡಿದ್ರೂ ಹೋಟೆಲ್ ಒಳಹೆ ಕಾಲಿಡಲು ಸಾಧ್ಯವಾಗಲೇ ಇಲ್ಲ. ಇನ್ನು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಡಿಕೆಶಿಯನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು ಅವರನ್ನು ಬೇರೆಡೆ ಶಿಫ್ಟ್ ಮಾಡಿದ್ರು.
ಇನ್ನು ಅತೃಪ್ತ ಶಾಸಕರನ್ನು ಭೇಟಿ ಮಾಡೋದಿರಲಿ, ಹೋಟೆಲ್ ನೊಳಕ್ಕೆ ಕಾಲಿಡೋದಕ್ಕೂ ಸಾಧ್ಯವಾಗೋದಿಲ್ಲ ಅಂತ ಅರಿತ ಡಿಕೆಶಿ ಇದೀಗ ಬೆಂಗಳೂರಿನತ್ತ ಬರಿಗೈಲಿ ಪ್ರಯಾಣ ಬೆಳೆಸಲಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗಾದ್ರೂ ಮಾಡಿ ಅವರನ್ನು ಮತ್ತೆ ಭೇಟಿ ಮಾಡಿಯೇ ತೀರುತ್ತೇನೆ ಅಂತ ಮತ್ತದೇ ಭರವಸೆಯೊಂದಿಗೆ ಪ್ರತಿಕ್ರಿಯಿಸಿದ್ರು.
ಕಾಂಗ್ರೆಸ್ ನ ಟ್ರಬಲ್ ಶೂಟರ್ ಗೆ ಸಂಕಷ್ಟ..! ಮಿಸ್ ಮಾಡದೇ ಈ ವಿಡಿಯೋ ನೋಡಿ