ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿದೆ. ಪವರ್ ಶೇರಿಂಗ್ ಕಂಪನ ಕಾಂಗ್ರೆಸ್‌ನಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದು, ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ.
ಸಿಎಂ ಕುರ್ಚಿಗೇರಲು ಅತ್ತ ಡಿಸಿಎಂ ಡಿಕೆ ಶಿವಕುಮಾರ್ ನಾನಾ ಪ್ರಯತ್ನ ಮಾಡ್ತಿದ್ದಾರೆ. ಇತ್ತ ಮತ್ತೆ ದಲಿತ ಸಿಎಂ ಕೂಗು ಜೋರಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಸಚಿವ ಮಹದೇವಪ್ಪ ಮನೆಯಲ್ಲಿ ಬ್ರೇಕ್ ಫಾಸ್ಟ್ ಸೀಕ್ರೇಟ್ ಮೀಟಿಂಗ್ ನಡೆದಿದೆ.
ಸಚಿವ ಡಾ. ಹೆಚ್.ಸಿ.ಮಹದೇವಪ್ಪ ನಿವಾಸಕ್ಕೆ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದ್ರು. ಮಹದೇವಪ್ಪ ಜೊತೆ ಪರಮೇಶ್ವರ್ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಸಿಎಂ ಬದಲಾವಣೆ, ದಲಿತ ಸಿಎಂ, ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ಉಭಯ ನಾಯಕರು ಚರ್ಚಿಸಿದ್ದಾರೆ.
ಪವರ್ ಶೇರಿಂಗ್ ಚರ್ಚೆ ನಡುವೆ ಮತ್ತೆ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದೆ. ಅಹಿಂದ ನಾಯಕರು ಒಗ್ಗಟ್ಟಾಗಿರಬೇಕು ಎಂದು ಸತೀಶ್ ಜಾರಕಿಹೊಳಿ ಸಂದೇಶ ನೀಡಿದ್ದು, ಕ್ರಾಂತಿಯ ಕಿಚ್ಚಿನ ನಡುವೆ ದಲಿತ ಸಚಿವರ ತಂತ್ರಗಾರಿಕೆ ಶುರುವಾಗಿದೆ. ಅಹಿಂದ ಸಮಾವೇಶ ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗ್ತಿದೆ.
ಪವರ್ ಶೇರಿಂಗ್ ಬಗ್ಗೆ ಸಚಿವ ಮಹದೇವಪ್ಪ ಮಾತನಾಡಿದ್ದು, ಎಲ್ಲವನ್ನೂ ತೀರ್ಮಾನ ಮಾಡೋದು ಹೈಕಮಾಂಡ್ ಎಂದು ಹೇಳಿದ್ರು. ಮಂತ್ರಿಮಂಡಲ ಯಾವಾಗ ರಚನೆ ಆಗಬೇಕು. ಮುಖ್ಯಮಂತ್ರಿ ಮುಂದುವರೆಯಬೇಕಾ ಅಥವಾ ಬೇರೆ ತೀರ್ಮಾನ ಮಾಡ್ಬೇಕಾ. ಈ ಎಲ್ಲವನ್ನೂ ಹೈಕಮಾಂಡ್ ಮಾಡುತ್ತದೆ. ಸಿಎಂ ಏನಾದ್ರೂ ಪವರ್ ಶೇರಿಂಗ್ ಮಾಡಿಕೊಳ್ತೇವೆ ಎಂದು ಹೇಳಿದ್ದಾರಾ. ಎಲ್ಲವೂ ಅಂತೆ ಕಂತೆಗಳಷ್ಟೇ. ಈ ವದಂತಿಗಳಿಗೆ ರೆಕ್ಕೆ ಪುಕ್ಕ ಏನೂ ಇಲ್ಲ ಎಂದು, ವ್ಯಂಗ್ಯವಾಗಿ ಹೇಳಿದ್ದಾರೆ.

