Saturday, November 8, 2025

Latest Posts

1 ವರ್ಷದ ಬಳಿಕ ಭವ್ಯ ರಾಮ ಮಂದಿರ ಕಾಮಗಾರಿ ಸಂಪೂರ್ಣ

- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯವಾಗಿದೆ. 2024ರ ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆದು, ಮಂದಿರ ಲೋಕಾರ್ಪಣೆಗೊಂಡಿತ್ತು. ಆದರೆ, ದೇವಾಲಯದ ಆವರಣದೊಳಗೆ ಕೆಲವು ಸಣ್ಣಪುಟ್ಟ ಕೆಲಸಗಳು ನಡೆಯುತ್ತಲೇ ಇದ್ದವು. 1 ವರ್ಷದ ನಂತರ, ಎಲ್ಲಾ ಕೆಲಸಗಳೂ ಪೂರ್ಣಗೊಂಡಿದೆ. ಈ ಬಗ್ಗೆ ರಾಮಮಂದಿರ ಟ್ರಸ್ಟ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಮಂದಿರದ ಆವರಣದೊಳಗೆ 6 ಬೇರೆ ಬೇರೆ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಮಹಾದೇವ, ಗಣೇಶ, ಆಂಜನೇಯ , ಸೂರ್ಯದೇವ, ಭಗವತಿ ಮತ್ತು ಅನ್ನಪೂರ್ಣೆಗೆ ಮುಡಿಪಾದ ಆರು ಪ್ರತ್ಯೇಕ ದೇವಸ್ಥಾನಗಳ ಕಾಮಗಾರಿ ಮುಗಿದಿದೆ. ಈ ಎಲ್ಲಾ ದೇವಸ್ಥಾನಗಳ ಶಿಖರದ ಮೇಲೆ ಕಳಶ ಮತ್ತು ಧ್ವಜಸ್ತಂಭಗಳನ್ನೂ ಅಳವಡಿಸಲಾಗಿದೆ.

ಮಹರ್ಷಿ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ಅಹಲ್ಯೆಯಂತಹ ರಾಮಾಯಣದ ಪ್ರಮುಖ ವ್ಯಕ್ತಿಗಳ ಗೌರವಾರ್ಥವಾಗಿ 7 ಮಂಟಪಗಳು, ಸಂತ ತುಳಸೀದಾಸರ ಮಂದಿರ, ಜಟಾಯು ಮತ್ತು ಪುಟ್ಟ ಅಳಿಲಿನ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.

3.5 ಕಿಲೋ ಮೀಟರ್ ಉದ್ದದ ಕಾಂಪೌಂಡ್ ಗೋಡೆ, ಟ್ರಸ್ಟ್ ಆಫೀಸ್, ಅತಿಥಿ ಗೃಹ ಮತ್ತು ಆಡಿಟೋರಿಯಂ ನಿರ್ಮಾಣದ ಕೆಲಸಗಳು ಇನ್ನೂ ನಡೆಯುತ್ತಿವೆ. ಆದರೆ, ಇದರಿಂದ ಭಕ್ತರ ದರ್ಶನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸದ್ಯ, L&T ಕಂಪನಿಯವರು ದೇವಸ್ಥಾನದ ಆವರಣದ ರಸ್ತೆಗಳಿಗೆ, ಕಲ್ಲು ಹಾಕುವ ಮತ್ತು ಫೈನಲ್ ಟಚ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ, GMR ಸಂಸ್ಥೆ 10 ಎಕರೆ ವಿಸ್ತೀರ್ಣದ ‘ಪಂಚವಟಿ’ ಪ್ರದೇಶದಲ್ಲಿ ಹಸಿರೀಕರಣ ಮತ್ತು ಸೌಂದರ್ಯದ ಕೆಲಸ ಮಾಡುತ್ತಿದೆ.

ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ, ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಆ ದಿನ ಶ್ರೀ ರಾಮ ಜನ್ಮಭೂಮಿ ಮಂದಿರದ ಶಿಖರದ ಮೇಲೆ ಧ್ವಜಾರೋಹಣ ಮಾಡುವ ವಿಶೇಷ ಕಾರ್ಯಕ್ರಮವಿದೆ. ಆ ಮಹತ್ವದ ದಿನದೊಳಗೆ ಉಳಿದ ಎಲ್ಲಾ ಪ್ರಮುಖ ಕೆಲಸಗಳನ್ನು ಮುಗಿಸಲಾಗುತ್ತದೆ.

- Advertisement -

Latest Posts

Don't Miss