Thursday, March 20, 2025

Latest Posts

ಹೆಚ್ಚಾಗ್ತಿದೆ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ- ಈಗ ಶುರು ದೋಸ್ತಿಗಳಿಗೆ ತಲೆನೋವು..!

- Advertisement -

ಕಲಬುರಗಿ: ಅತೃಪ್ತರ ಶಾಸಕರನ್ನ ಸಮಾಧಾನ ಮಾಡೋಕೆ ದೋಸ್ತಿಗಳೇನೋ ಅವರಿಗೆ ಸಚಿವ ಸ್ಥಾನದ ಆಫರ್ ನೀಡೋ ಯೋಜನೆಯಲ್ಲಿದ್ದಾರೆ. ಆದ್ರೆ ಈ ಮಧ್ಯೆ ಇತರೆ ಶಾಸಕರೂ ಕೂಡ ನನಗೂ ಮಂತ್ರಿಯಾಗೋ ಆಸೆ ಇದೆ ಅನ್ನೋದಕ್ಕೆ ಶುರು ಮಾಡಿದ್ದಾರೆ. ಇದೀಗ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಸಚಿವರಾಗೋ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಈ ಹಿಂದೆಯೇ ನನಗೆ ಸಚಿವ ಸ್ಥಾನ ನೀಡಿ ಅಂತ ಕೇಳಿದ್ದೆ. ಅದಕ್ಕೆ ವರಿಷ್ಠರು ಮುಂದೆ ಅವಕಾಶ ಕೊಡ್ತೇವೆ ಅಂತ ಭರವಸೆ ನೀಡಿದ್ರು ಅಂತ ಹೇಳಿದ್ದಾರೆ. ಅಲ್ಲದೆ ಇದೀಗ ವರಿಷ್ಠರು ಒಳ್ಳೇ ನಿರ್ಧಾರ ಕೈಗೊಳ್ತಾರೆ ಅನ್ನೋ ನಂಬಿಕೆ ನನಗಿದೆ. ಬೀದರ್ ಜಿಲ್ಲೆಯಿಂದ 3 ಸಚಿವರಿದ್ದಾರೆ. ಆದರೆ ದೊಡ್ಡ ಜಿಲ್ಲೆ ಕಲಬುರಗಿಯಿಂದ ಕೇವಲ ಒಂದು ಸಚಿವ ಸ್ಥಾನವಿದೆ. ನಮ್ಮ ಜಿಲ್ಲೆಯ ಇಬ್ಬರನ್ನು ಮಂತ್ರಿ ಮಾಡಲು ಜನ ಆಗ್ರಹಿಸುತ್ತಿದ್ದಾರೆ ಅಂತ ಅಜಯ್ ಸಿಂಗ್ ಹೇಳಿದ್ದಾರೆ.

ಇನ್ನ ಬಿಜೆಪಿಯವರು ಈಗಲೂ ನನ್ನನ್ನು ಕರೆಯುತ್ತಿದ್ದಾರೆ, ಆದರೆ ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿರೋದ್ರಿಂದ ನಾನೆಂದೂ ಕಾಂಗ್ರೆಸ್ ತೊರೆಯೋ ಯೋಚನೆ ಮಾಡಲ್ಲ ಅಂತ ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿಯೂ ಶಾಸಕ ಅಜಯ್ ಸಿಂಗ್ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ರೆ ಇದೀಗ ಅಜಯ್ ಸಿಂಗ್ ಕೂಡ ತಾನೂ ಸಚಿವ ಸ್ಥಾನಾಕಾಂಕ್ಷಿ ಅಂತ ಹೇಳೋ ಮೂಲಕ ಇದೀಗ ದೋಸ್ತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ನಿಜವಾಗಿಯೂ ಸಿಂಗ್ ಮಂತ್ರಿಗಿರಿ ಗಿಟ್ಟಿಸಿಕೊಳ್ತಾರಾ ಅಂತ ಕಾದು ನೋಡ್ಬೇಕಿದೆ.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೋದಿ ಈ ದೇಶಕ್ಕೆ ಯಾಕೆ ಹೋಗ್ತಾರೆ ಗೊತ್ತಾ…? ತಿಳಿದುಕೊಳ್ಳೋಕೆ ಈ ವಿಡಿಯೋ ತಪ್ಪದೇ ನೋಡಿ.

- Advertisement -

Latest Posts

Don't Miss