Dharwad News: ಧಾರವಾಡ: ಕಿತ್ತೂರು ಹೊರವಲಯದಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ವಿನಯ್ ಕುಲಕರ್ಣಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಪರ ಪ್ರಚಾರ ಹಿನ್ನೆಲೆ, ಕಿತ್ತೂರು ಬಳಿ ವಿನಯ್ ಕುಲಕರ್ಣಿ ಪ್ರಚಾರ ಸಭೆ ಕರೆದಿದ್ದಾರೆ. ಈ ವೇಳೆ ಮಾತನಾಡಿರುವ ಸಂತೋಷ್ ಲಾಡ್, ಮಹದಾಯಿ ಬಗ್ಗೆ ನಿನ್ನೆ ಜೋಶಿಯವರು ಮಾತನಾಡಿದ್ದಾರೆ. ಇನ್ನಾದರೂ ಸೋನಿಯಾ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಪವರ್ ಫುಲ್ ಇರುವ ಮೋದಿ ಸಾಹೇಬರು ಯಾಕೆ ನೀರು ತರುತ್ತಿಲ್ಲ..? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಹ ಸೋನಿಯಾ ಗಾಂಧಿ ಬಗ್ಗೆ ಮಾತನಾಡುತ್ತಿದ್ದಾರೆ. 55 ಲಕ್ಷ ಸಾಲ ಕೋಟಿ ಭಾರತದ ಮೇಲಿದೆ. 70 ವರ್ಷದಲ್ಲಿ ಆಗದ ಕೆಲಸ 10 ವರ್ಷದಲ್ಲಿ ಆಗಿದೆಯಾ..? ಯಾವುದು ಸಹ ಉಚಿತವಾಗಿ ನೀವು ಕೊಟ್ಟಿಲ್ಲ. 16 ಲಕ್ಷ ಕೋಟಿ ಉದ್ಯಮಿದಾರ ಸಾಲ ಮನ್ನಾ ಆಗಿದೆ. ಯಾವುದೇ ರೈತರ ಸಾಲ ಮನ್ನಾ ಆಗಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರದ ಬಗ್ಗೆ ಮಾತನಾಡಿರುವ ಸಂತೋಷ್ ಲಾಡ್, ಮೊದಲು ಕೇಸ್ ಆಗಿದ್ರೆ ನಾವು ಬಿಡುತ್ತಿರಲಿಲ್ಲ. ಮೋದಿ ಅವರ ಬಳಿ ಡ್ಯಾಶ್ ಬೋರ್ಡ್ ಇದೆ. ಎಲ್ಲೆಲ್ಲಿ ಏನೇನು ಆಗಿದೆ ಅವರಿಗೆ ಎಲ್ಲ ಗೊತ್ತಾಗುತ್ತೆ. ಅಂಥದರಲ್ಲಿ ಇವರನ್ನ ಹಿಡಿಯಬಹುದು. ಏಕನಾಥ ಶಿಂಧೆ ಇಂದು ಬರುತ್ತಾರೆ. ಅವರು ಕನ್ನಡದ ವಿರೋಧಿ. ಮಹದಾಯಿ ನೀರಿಗೆ ಅಡ್ಡಗಾಲು ಹಾಕಿದವರು ಅವರು. ಅಂತವರು ಇಲ್ಲಿಗೆ ಬರುತ್ತಿದ್ದಾರೆ. ಅವರಿಗೆ ಇಂದು ಪ್ರಶ್ನೆ ಮಾಡಬೇಕು. ಪವರ್ ಫುಲ್ ಇರುವ ಮೋದಿ ಅವರು ಚಿಟಿಕೆ ಹೊಡೆಯುವಷ್ಟರಲ್ಲಿ ನೀರು ತರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ನೀತಿ ಸಂಹಿತೆ ಹಿನ್ನೆಲೆ ಬರ ಪರಿಹಾರ ತಡ ಎನ್ನುವ ಶಾ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿರುವ ಸಂತೋಷ್ ಲಾಡ್, ನಾವು ತಡವಾಗಿ ರಿಪೋರ್ಟ್ ಹಾಕಿದ್ದಿವಿ ಅಂತ ಹೇಳಿದ್ರು. ಈಗ ನಮ್ಮ ಮೇಲೆ ಹಾಕುತ್ತಿದ್ದಾರೆ. ನಾವು ಯಾಕೆ ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತು. ಅದಾದ ಮೇಲೆ ನಮಗೆ ಬರ ಪರಿಹಾರ ಬಂದಿದೆ. ಅತ್ಯುತ್ತಮ ಕೆಲ್ಸ ಮಾಡಿದ ಕಾರಣಕ್ಕೆ ಶಾ ರಿಂದ ಜೋಶಿಗೆ ಅಭಿನಂದನಾ ಪತ್ರ ಹಿನ್ನೆಲೆ. ಸುಳ್ಳು ಗುರು ಇನ್ನೊಬ್ಬ ಸುಳ್ಳು ಗುರುವಿಗೆ ಲೆಟರ್ ಕೊಟ್ಟರೆ ನಾವೇನು ಮಾಡೋಣ ಎಂದು ಲಾಡ್ ತಮಾಷೆ ಮಾಡಿದ್ದಾರೆ.
ಬೋಲ್ಡಿಜರ್ ತಂದು ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಮಾಡಿ ನೋಡೋಣ. ಜೋಶಿಯವರು ಹುಬ್ಬಳ್ಳಿಯನ್ನ ಬೆಂಗಳೂರು ಮಾಡ್ತೀನಿ ಅಂತ ಹೇಳಿದ್ರು. ಹೇಗೆ ಮಾಡ್ತೀರಿ, ಸುಮ್ನೆ ಹೇಳೋದು. ಬರೀ ಸುಳ್ಳುಗಳನ್ನ ಹೇಳೋದು. 6500ಕೋಟಿ ಹಣವನ್ನ ಸುಳ್ಳು ಹೇಳಲು ಮೋದಿ ಖರ್ಚು ಮಾಡುತ್ತಿದ್ದಾರೆ.
ನೇಹಾ ಹತ್ಯೆ ಪ್ರಕರಣ ಹಿನ್ನೆಲೆ ಸಿಬಿಐ ಕೊಡಿ ಎಂದಿರುವ ಶಾ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಲಾಡ್, ಅಮಿತ್ ಶಾ ಅವರು ನನ್ನ ಜೊತೆ ದಿಬೆಟ್ ಮಾಡ್ತಾರಾ ಕೇಳಿ. ಎಷ್ಟು ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ ಎಂದು ದಾಖಲೆ ಇದೆ. ನೇಹಾ ಹಿರೇಮಠ್ ಹತ್ಯೆಗೆ ಸಂಬಂಧಿಸಿದಂತೆ ಮತ್ತಷ್ಟು ನ್ಯಾಯ ಬೇಕಾದರೂ ಕೊಡಿಸುವ ಕಾರ್ಯ ಆಗುತ್ತೆ ಎಂದು ಸಂತೋಷ್ ಹೇಳಿದ್ದಾರೆ.
ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಮಾಡಿದ ದ್ರೌಪದಿ ಮುರ್ಮು




