Kolar News: ಕೋಲಾರ: ಕೋಲಾರದಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಕಾಂಗ್ರೆಸ್ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನ ಯಶಸ್ವಿಯಾಗಿ ಕೊಟ್ಟಿದೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ, ರೈತರಿಗೆ, ಹೆಲ್ತ್, ಲೇಬರ್ಸ್, ನಿರುದ್ಯೋಗ ಯುವಕರಿಗೆ ಭತ್ಯೆ. ರಾಜ್ಯ ಗ್ಯಾರಂಟಿಗಳೊಂದಿಗೆ ಕೇಂದ್ರ ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಇದ್ರಿಂದ ಬಿಜೆಪಿ ಕೋಪಗೊಂಡಿದೆ. ಈ ಗ್ಯಾರಂಟಿಗಳಿಂದ ದೇಶ ದಿವಾಳಿ ಆಗುತ್ತದೆ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ನಾನು ಚಾಲೆಂಜ್ ಮಾಡುವೆ ಈ ಗ್ಯಾರಂಟಿಗಳಿಂದ ದೇಶ ದಿವಾಳಿ ಆಗುವುದಿಲ್ಲ. ಬಿಜೆಪಿ ಮೋದಿ ಸರ್ಕಾರ ಚಂಬು ನೀಡಿದೆ. ಕರ್ನಾಟಕ ರಾಜ್ಯಕ್ಕೆ ರಸ್ತೆ ನೀರು ಸೇರಿದಂತೆ ಅನೇಕ ವಿಚಾರದಲ್ಲಿ ಚಂಬು ನೀಡಿದೆ.
ಮೋದಿ ಅವರ ಗ್ಯಾರಂಟಿಗಳು ಫೇಕ್ ಆಗಿವೆ. 15 ಲಕ್ಷ ಅಕೌಂಟ್ ಗೆ ಹಾಕುತ್ತೇನೆ ಎಂದರು ಅದು ಫೇಕ್ . ಉದ್ಯೋಗ ಕೊಡ್ತೇನೆ ಅಂದರು ಅದು ಫೇಕ್. 100 ಸ್ಮಾರ್ಟ್ ಸಿಟಿಗಳು ಮಾಡುತ್ತೇನೆ ಎಂದಿರುವುದು ಅದು ಫೇಕ್. ಸ್ವಿಜ್ ಬ್ಯಾಂಕ್ ನಿಂದ ಕಪ್ಪು ಹಣ ತರುತ್ತೇನೆ ಎಂದಿದ್ದು ಫೇಕ್. ಅದೇ ರೀತಿ ಮೋದಿ ಅವರ ಗ್ಯಾರಂಟಿಗಳು ಫೇಕ್ ಆಗಿವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಕಾಂಗ್ರೆಸ್ ನಮ್ಮ ರಾಜ್ಯದಲ್ಲಿ “ಇವತ್ತು ಜೈಲ್, ನಾಳೆ ಬೇಲ್” ಎಂಬ ಸರಳ ಪ್ರೋಟೋಕಾಲ್ ಸ್ಥಾಪಿಸಿದೆ: ತೇಜಸ್ವಿ ಸೂರ್ಯ
ಇದೇನಾ ನಿಮ್ಮ ಮೊಹಬ್ಬತ್ ಕೀ ದುಕಾನ್?? ನಾಚಿಕೆಗೇಡು ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಬಸನಗೌಡ ಪಾಟೀಲ್ ಯತ್ನಾಳ್