Saturday, April 12, 2025

Latest Posts

ತಾನೇ ಹೆತ್ತ ಮಕ್ಕಳ ಅನ್ನಕ್ಕೆ ವಿಷ ಹಾಕಿ, ತಾನೂ ಜೀವ ಕಳೆದುಕೊಳ್ಳಲು ಯತ್ನಿಸಿದ ತಾಯಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಹೆತ್ತ ಮಕ್ಕಳಿಗೆ ಪಾಪಿ ತಾಯಿಯೊಬ್ಬಳು ಊಟದಲ್ಲಿ ವಿಷ ಹಾಕಿಕೊಟ್ಟಿದ್ದಾರೆ. ಅಲ್ಲದೇ ತಾನೂ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಧಾರವಾಡ ಜಿಲ್ಲೆ ಯಮನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬ ಕಲಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಾಲ ಎಂಬ ಮಹಿಳೆ ಈ ಕೃತ್ಯಕ್ಕೆ ಕೈ ಹಾಕಿದ್ದು, ಈಕೆ ಕೊಪ್ಪಳ ತಾಲೂಕಿನ ಗೊಂಡವಾಳ ಗ್ರಾಮದವರು. ಆದರೆ ಧಾರವಾಡಕ್ಕೆ ಚಾಂಗದೇವ್ ದೇವರ ಜಾತ್ರೆಗೆ ಬಂದಿದ್ದು, ಈ ವೇಳೆ ತನ್ನಿಬ್ಬರು ಮಕ್ಕಳ ಅನ್ನಕ್ಕೆ ವಿಷ ಹಾಕಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸದ್ಯ ತಾಯಿ ಮತ್ತು ಇಬ್ಬರು ಮಕ್ಕಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Latest Posts

Don't Miss