Movie News: ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರದ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ 25 ಸೆಲೆಬ್ರಿಟಿಗಳ ವಿರುದ್ಧ ಹೈದ್ರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಾಲಿವುಡ್ ನಟ ಹಾಗೂ ನಟಿಯರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸದನದಲ್ಲೂ ಪ್ರತಿಧ್ವನಿಸಿದ್ದ ಬೆಟ್ಟಿಂಗ್ ಭೂತ…
ಇನ್ನೂ ರಾಜ್ಯದ ವಿಧಾನಸಭೆಯಲ್ಲೂ ಈ ಬೆಟ್ಟಿಂಗ್ ದಂಧೆಯ ಬಗ್ಗೆಯ ಸ್ವತಃ ಶಾಸಕರೇ ಅಳಲು ತೋಡಿಕೊಂಡಿದ್ದಾರೆ. ಬೆಳಗಾವಿಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಬೆಟ್ಟಿಂಗ್ ಆ್ಯಪ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಗಳ ಮೊಬೈಲ್ ತೆಗೆದ್ರೆ ಸಾಕು ಆನ್ ಲೈನ್ ಬೆಟ್ಟಿಂಗ್ ನೋಟಿಫಿಕೇಶನ್‌ಗಳೇ ಇರುತ್ತೇವೆ. ಇದರಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ಕಿಡಿಕಾರಿದ್ದ ಅಭಯ್ ಪಾಟೀಲ್ ಇವುಗಳನ್ನು ನಿಯಂತ್ರಿಸುವಂತೆ ಒತ್ತಾಯ ಮಾಡಿದ್ದರು.
ದೂರು ದಾಖಲಿಸಿದ್ದ ಸಾರ್ವಜನಿಕರು..
ಇನ್ನೂ ಹೈದ್ರಾಬಾದ್‌ನಲ್ಲಿ ವ್ಯಾಪಕವಾಗಿ ಬೇರೂರಿರು ಈ ಆನ್ಲೈನ್ ಬೆಟ್ಟಿಂಗ್ ಜಾಲಕ್ಕೆ ಈಗಾಗಲೇ ಸಾಕಷ್ಟು ಯುವಕರು ಹಾಗೂ ಪೊಲೀಸರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದರು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೈದ್ರಾಬಾದ್ನ ಮಾತೃಶ್ರೀನಗರದ ಖಾಸಗಿ ಉದ್ಯೋಗಿಯೊಬ್ಬರು ಸಲ್ಲಿಸಿರುವ ದೂರಿನ ಮೇರೆಗೆ ಬೆಟ್ಟಿಂಗ್ ಪೊಲೀಸರು ಬೆಟ್ಟಿಂಗ್ ಜಾಲವನ್ನು ಭೇದಿಸಲು ಮುಂದಾಗಿದ್ದಾರೆ. ಅಲ್ಲದೆ ಕಲಂ 1867 ರ ಸಾರ್ವಜನಿಕ ಜೂಜಾಟ ಕಾಯ್ದೆಯನ್ನು ಉಲ್ಲಂಘಿಸಿ ಜೂಜಾಟ ಚಟುವಟಿಕೆಗಳನ್ನು ಉತ್ತೇಜಿಸುವ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಬಗ್ಗೆ ದೂರುದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ನಾನು ಹೈದ್ರಾಬಾದ್ ಅಮೀರ್‌ಪೇಟೆಯಲ್ಲಿ ತರಬೇತಿಗೆ ಹೋಗುತ್ತಿದ್ದಾಗ ಹಲವಾರು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ಬೆಟ್ಟಿಂಗ್ ಆ್ಯಪ್‌ಗಳ ಬಗ್ಗೆ ಆಗಾಗ್ಗೆ ಚರ್ಚಿಸುತ್ತಿರುವುದನ್ನು ಗಮನಿಸಿದ್ದೇವೆ. ಆನ್‌ಲೈನ್‌ನಲ್ಲಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡಲಾಗುವ ಈ ಪ್ಲಾಟ್‌ಫಾರ್ಮ್‌ಗಳು ಯುವಜನರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಜೂಜಾಟವನ್ನು ಪೋಷಿಸುತ್ತಿವೆ. ಅಲ್ಲದೆ ಅವರ ಆರ್ಥಿಕ ಕುಸಿತಕ್ಕೆ ಕಾರಣವಾಗುತ್ತಿವೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಪ್ರಮೋಷನ್ ಕೆಲಸಗಳಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆ. ಈ ಬೆಟ್ಟಿಂಗ್ ಪ್ರಚಾರದಿಂದ ಪ್ರೇರಿತರಾಗಿ ನಾವು ಆ್ಯಪ್ ಒಂದು ಒಂದರಲ್ಲಿ ಹೂಡಿಕೆ ಮಾಡಲು ಯೋಚಿಸಿದ್ದೆವು. ಆದರೆ ನಮ್ಮ ಕುಟುಂಬದವರ ಎಚ್ಚರಿಕೆಯ ನಂತರ ಹಣ ಹಾಕಲಿಲ್ಲ ಮಾಡಲಿಲ್ಲ. ಅಲ್ಲದೆ ಈ ಸಾಮಾಜಿಕ ಜಾಲತಾಣಗಳಲ್ಲಿ ಬೆಟ್ಟಿಂಗ್ ಆ್ಯಪ್‌ಗಳ ಬಗ್ಗೆ ಪ್ರಚಾರ ಮಾಡುತ್ತಿದ್ದವರ ಎಲ್ಲ ಸೆಲೆಬ್ರಿಟಿಗಳ ವಿವರವನ್ನು ದೂರಿನಲ್ಲಿ ನೀಡಿದ್ದಾರೆ. ಇನ್ನೂ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಹೆಸರುಗಳನ್ನು ಒಳಗೊಂಡ ಸಂಪೂರ್ಣವಾದ ವಿವರಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ.
ಅಲದೆ ಈ ಅಪ್ಲಿಕೇಶನ್‌ಗಳು ಸಾವಿರಾರು ಕೋಟಿ ಮೌಲ್ಯದ ವಹಿವಾಟುಗಳನ್ನು ಮಾಡಲು ಜನರನ್ನು ಬಲಿ ಪಡೆಯುತ್ತಿವೆ. ಅಲ್ಲದೆ ಇವುಗಳನ್ನು ಬ್ಯಾನ್ ಮಾಡಲು ಪೊಲೀಸ್ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಹೆಚ್ಚಿನ ತನಿಖೆಗೆ ಸಹಾಯ ಮಾಡಲು ದೂರುದಾರರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ತಮಗೆ ಬಂದ ದೂರಿನ ಆಧಾರದ ಮೇಲೆ, ಪಂಜಾಗುಟ್ಟ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಬಿಎನ್‌ಎಸ್‌ನ ಸೆಕ್ಷನ್ 318/4, ಗೇಮಿಂಗ್ ಕಾಯ್ದೆಯ ಸೆಕ್ಷನ್ 3, 3ಎ, ಮತ್ತು 4 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.