Movie News: ಕಾಶಿನಾಥ್ ಅವರ ಮಗ ಅಭಿಮನ್ಯು ಕಾಶಿನಾಥ, ಎಲ್ಲಿಗೆ ಪಯಣ, ಯಾವುದೋ ದಾರಿ ಎನ್ನುವ ಸಿನಿಮಾ ಮೂಲಕ, ಸ್ಯಾಂಡಲ್‌ವುಡ್‌ನಲ್ಲಿ ಎರಡನೇಯ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಕರ್ನಾಟಕ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.
ಅಭಿಮನ್ಯು ಕಾಶಿನಾಥ್ ಹೇಳುವ ಪ್ರಕಾರ, ನಿರ್ದೇಶಕರಿಗೆ ಅಭಿಮನ್ಯುವಿನ ಜೊತೆ ಸಿನಿಮಾ ಕಥೆ ಬಗ್ಗೆ ಚರ್ಚಿಸಲು ಏನೂ ತೊಂದರೆ ಇಲ್ಲ, ಆದರೆ ಅವರು ಮಾತನಾಡುತ್ತಿರುವುದು ಅಭಿಮನ್ಯು ಕಾಶಿನಾಥ್ ಜೊತೆ ಅಂತ ಅಂದಾಗ, ಸ್ವಲ್ಪ ಇರುಸು ಮುರುಸಾಗುತ್ತದೆ. ಆದರೆ ಕಾಶಿನಾಥ್ ಅನ್ನೋದು ನನ್ನ ಹೆಸರಿನ ಜೊತೆ ಬಂದಿರುವುದು, ಅದಕ್ಕೆ ನಾನೇನು ಮಾಡಲಾಗುವುದಿಲ್ಲ. ಅಲ್ಲದೇ ಮೊದಲ ಭೇಟಿ ಅಷ್ಟೇನು ಚೆನ್ನಾಗಿರಲಿಲ್ಲ. ಆದರೆ ಮತ್ತೆ ಮತ್ತೆ ನಿರ್ದೇಶಕರು ಭೇಟಿಯಾಗಿ, ಕಂಫರ್ಟಟೇಬಲ್ ಆಗಿ, ಸಿನಿಮಾ ಕಥೆ ಬಗ್ಗೆ ನನ್ನಲ್ಲಿ ಚರ್ಚಿಸುತ್ತಿದ್ದರು ಎಂದು ಅಭಿಮನ್ಯು ಕಾಶಿನಾಥ್ ಹೇಳಿದ್ದಾರೆ.
ಇನ್ನು ಸಿನಿಮಾ ನಟಿ ಕೂಡ ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಚಿಕ್ಕ ಮಗಳೂರಿನಲ್ಲಿ ಬೆಳೆದಿರುವ ನಟಿ, ಬಾಲ್ಯದಿಂದಲೂ ಕನ್ನಡಿ ನೋಡಿ ಹಾಡು ಹೇಳುವುದು, ನಟಿಸುವುದೆಲ್ಲವನ್ನೂ ಮಾಡುತ್ತಿದ್ದರಂತೆ. ನನಗೆ ಬಾಲ್ಯದಲ್ಲಿ ಗೆಳೆಯರಿರಲಿಲ್ಲ. ಕನ್ನಡಿಯೇ ನನಗೆ ಫ್ರೆಂಡ್ ಆಗಿದ್ದು, ನಾನು ಕನ್ನಡಿ ಮುಂದೆ ನಿಂತು ನಟನೆ, ನೃತ್ಯ ಮಾಡುತ್ತಿದ್ದೆ ಎಂದು ನಟಿ ಹೇಳಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.