Health Tips: ನಾಲ್ಕು ಜನರ ಮಧ್ಯೆ ನಾವು ಚೆಂದಗಾಣಿಸಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಬೇಕು ಅಂತಾ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಆದರೆ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಒಂದು ಸೌಂದರ್ಯ ಸಮಸ್ಯೆ ಅಂದ್ರೆ ಮೊಡವೆ. ಕರೆಕ್ಟ್ ಆಗಿ ಯಾವುದಾದರೂ ಮುಖ್ಯವಾದ ದಿನ, ಕಾರ್ಯಕ್ರಮಗಳು ಇದ್ದಾಗಲೇ, ಈ ಮೊಡವೆ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಮೊಡವೆ ಬರಬಾರದು ಅಂದ್ರೆ, ನಾವು ಯಾವ ತಪ್ಪುಗಳನ್ನು ಮಾಡಬಾರದು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರೇ ಹೇಳಿದ್ದಾರೆ ನೋಡಿ.
ಮುಖದ ಕಳೆ ಹೋಗಲು, ಮೊಡವೆ ಹೆಚ್ಚಾಗಲು ಕಾರಣ ಅಂದ್ರೆ ಹೆಣ್ಣು ಮಕ್ಕಳಿಗೆ ಮನೆಗೆಲಸ ಮತ್ತು ಆಫೀಸು ಕೆಲಸದ ಒತ್ತಡ. ಎರಡೂ ಕೆಲಸವನ್ನು ನಿಭಾಯಿಸುವ ಭರದಲ್ಲಿ ಹೆಣ್ಣು ಮಕ್ಕಳು ಸರಿಯಾಗಿ ನೀರಿನ ಸೇವನೆ ಮಾಡುತ್ತಿಲ್ಲ. ಆರೋಗ್ಯಕರ, ತಂಪಾದ ಆಹಾರ ಸೇವನೆ ಮಾಡುತ್ತಿಲ್ಲ. ಕೆಲಸದ ಜವಾಬ್ದಾರಿ ನಿಭಾಯಿಸುವ ಭರದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು, ತಮ್ಮ ಆರೋಗ್ಯ, ಸೌಂದರ್ಯ ಕಾಳಜಿ ಮಾಡುವುದನ್ನೇ ಮರೆತಿದ್ದಾರೆ.
ಇನ್ನು ಮನೆಯಲ್ಲಿಯೇ ಮಾಡಿದ ಆರೋಗ್ಯಕರ ಅಡುಗೆಗಿಂತ, ಹೊರಗಡೆ ಸಿಗುವ ಆಹಾರ, ಹೊಟೇಲ್ ಊಟ, ಚಾಟ್ಸ್ ತಿನ್ನುವ ಅಭ್ಯಾಸವೇ, ಇಂದಿನ ಹೆಣ್ಣು ಮಕ್ಕಳ ಸೌಂದರ್ಯ ಹಾಳಾಗಲು ಮುಖ್ಯ ಕಾರಣ ಅಂತಾರೆ ವೈದ್ಯರು. ಅಲ್ಲದೇ ವ್ಯಾಯಾಮ ಮಾಡದಿರುವುದು, ವಾಕಿಂಗ್, ಜಾಗಿಂಗ್ ಕಡಿಮೆಯಾಗಿರುವುದು. ಅಥವಾ ನಡೆಯುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿರುವುದು. ಇತ್ಯಾದಿ ಅಂಶಗಳು ನಮ್ಮ ಸೌಂದರ್ಯ ಹಾಳಾಗಲು ಕಾರಣ ಅಂತಾರೆ ವೈದ್ಯರು.
ಇನ್ನು ಆಹಾರ ಪದ್ಧತಿ ಕೂಡ ತಪ್ಪಾಗಿರುವುದು ಇದಕ್ಕೆ ಕಾರಣವಾಗಿದೆ. ಬೇಕರಿ ತಿಂಡಿ, ಮಾಂಸಾಹಾರ, ಪಿಜ್ಜಾ ಬರ್ಗರ್ ಸೇವನೆ, ಎಣ್ಣೆ ಪದಾರ್ಥಗಳನ್ನು ಹೆಚ್ಚು ಸೇವಿಸುವುದು. ತಂಪು ಆಹಾರವನ್ನು ಸೇವಿಸದೇ ಇರುವುದು, ನೀರಿನ ಸೇವನೆಯ ಕೊರತೆ, ಹಣ್ಣು- ತರಕಾರಿ, ಕಾಳು- ಸೊಪ್ಪುಗಳ ಸೇವನೆ ಮಾಡದೇ ಇರುವುದು ಕೂಡ, ನಮ್ಮ ಸೌಂದರ್ಯ ಹಾಳಾಗಲು ಕಾರಣವಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಾಗಿ ಲೀಡಿಯೋ ನೋಡಿ.