Saturday, January 18, 2025

Latest Posts

Movie News: ಪುಷ್ಪ2 ಕ್ಲೈಮ್ಯಾಕ್ಸ್ ನ ವ್ಯಕ್ತಿ ಯಾರು? ರಿವೀಲ್ ಆದ್ರಾ ಹೀರೋ?

- Advertisement -

Movie News: ಸದ್ಯ ಎಲ್ಲೆಡೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಬಗ್ಗೆಯೇ ಸುದ್ದಿ. ಅದರ ಜ್ವರ ಇನ್ನೂ ಕಮ್ಮಿಯಾಗಿಲ್ಲ. ಮಳೆ ನಿಂತರೂ ಮಳೆಯ ಹನಿ ನಿಲ್ಲೋದಿಲ್ಲ ಅನ್ನುವ ಹಾಗೆ, ಚಿತ್ರ ನೋಡಿಕೊಂಡು ಹೊರಬಂದರೂ, ಸಿನಿಮಾದಲ್ಲಿ ಕಾಡುವ ಅನೇಕ ಅಂಶಗಳ ಬಗ್ಗೆ ಈಗಲೂ ಚರ್ಚೆ ಆಗುತ್ತಿದೆ. ಹೌದು, ಸದ್​ಯ ಪುಷ್ಪ 2 ಸಿನಿಮಾದ ಕ್ಲೈಮ್ಯಾಕ್ಸ್ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಕ್ಲೈಮ್ಯಾಕ್ಸ್ ನಲ್ಲಿ ಒಬ್ಬ ವ್ಯಕ್ತಿ ಎಂಟ್ರಿಯಾಗುತ್ತಾನೆ. ಅಲ್ಲಿ ಎಂಟ್ರಿಯಾಗುವ ಆ ವ್ಯಕ್ತಿ ಯಾರು ಅನ್ನೋದೇ ಚರ್ಚೆ. ಅದು ಯಾರು ಅಂತ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಬಹುದೊಡ್ಡ ಚರ್ಚೆ. ಕೆಲವರು ಕಾಮೆಂಟ್ ಮೂಲಕ ಅದು ಬೇರಾರೂ ಅಲ್ಲ, ವಿಜಯ್ ದೇವರಕೊಂಡ ಎನ್ನುತ್ತಿದ್ದಾರೆ. ಹಾಗಾದರೆ, ದೇವರಕೊಂಡ ಪುಷ್ಪ3ನಲ್ಲಿ ಇರ್ತಾರಾ ಎಂಬ ಪ್ರಶ್ನೆಗಳೂ ಇವೆ. ಅದು ನಿಜಾನ, ಅದೆಲ್ಲವೂ ಸುಳ್ಳು ಅವರು ವಿಜಯ್ ದೇವರಕೊಂಡ ಅಲ್ಲ ಎಂಬ ಮಾತೂ ಕೇಳಿಬರುತ್ತಿದೆ.

‘ಪುಷ್ಪ 2’ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅಷ್ಟೇ ಅಲ್ಲ, ಸುದ್ದಿಯೂ ಆಗಿದೆ. ಅದೊಂದು ಸಕ್ಸಸ್ ಆದಂತಹ ಸಿನಿಮಾ. ಇನ್ನು, ಪುಷ್ಟ 2ನಲ್ಲಿ ಬರುವ ಪ್ರತಿ ಪಾತ್ರಗಳೂ ಎಲ್ಲರ ಗಮನ ಸೆಳೆದಿರೋದು ನಿಜ. ‘ಪುಷ್ಪ 2’ ನೋಡಿದವರಿಗೆ ಕ್ಲೈಮ್ಯಾಕ್ಸ್ ನಲ್ಲಿ ಬರುವ ಒಂದು ಪಾತ್ರ ಗಮನ ಸೆಳೆಯುತ್ತೆ. ಅಲ್ಲಿ ಎಂಟ್ರಿಯಾಗುವ ಆ ವ್ಯಕ್ತಿ ಯಾರು ಅನ್ನೋದು ಸದ್ಯ ಎದ್ದಿರುವ ಪ್ರಶ್ನೆ. ಒಂದಷ್ಟು ಮಂದಿ ಕಾಮೆಂಟ್ ಮಾಡುವ ಮೂಲಕ ಅವರು ವಿಜಯ್ ದೇವರಕೊಂಡ ಎನ್ನುತ್ತಿದ್ದಾರೆ.

ಸದ್ಯ ಎಲ್ಲೆಡೆ ಪುಷ್ಪ 2’ ಸುದ್ದಿ ಮಾಡಿದೆ. ಅಂತೆಯೇ ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕ್ಲೈಮ್ಯಾಕ್ಸ್ ವೇಳೆ ಒಂದು ಕ್ಯಾರೆಕ್ಟರ್ ಎಂಟ್ರಿಯಾಗುತ್ತೆ. ಅದರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿರೋದೇ ಈ ಹೊತ್ತಿನ ವಿಶೇಷ. ಹಾಗಾದರೆ ಆ ನಟ ಯಾರು? ಇದು ಅಂತೆ-ಕಂತೆಗಳಲ್ಲೇ ಮಾತುಗಳು ಓಡಾಡುತ್ತಿವೆ. ಹಾಗಾದರೆ, ಆ ಪಾತ್ರಧಾರಿ ಯಾರು?

ಹಾಗೆ ಹೇಳುವುದಾದರೆ, ಪುಷ್ಪರಾಜ್ ಹಾಗೂ ಶ್ರೀವಲ್ಲಿ ಕುಟುಂಬ ಮನೆಯಲ್ಲಿ ಖುಷಿಯಿಂದಲೇ ಕಾಲ ಕಳೆಯುತ್ತಿರುತ್ತಾರೆ. ಶ್ರೀವಲ್ಲಿ ಪ್ರೆಗ್ನೆಂಟ್ ಕೂಡ ಆಗಿದ್ದಾಳೆ. ಕ್ಲೈಮ್ಯಾಕ್ಸ್ ನಲ್ಲಿ ಇವರು ಕುಟುಂಬದ ಮದುವೆಯಲ್ಲಿರುವಾಗ ಬಾಂಬ್ ವೊಂದು ಸ್ಫೋಟವಾಗುತ್ತೆ. ದೂರದಲ್ಲಿ ನಿಂತುಕೊಂಡ ವ್ಯಕ್ತಿಯೊಬ್ಬ ಈ ದುರಂತಕ್ಕೆ ಕಾರಣ. ಆದರೆ, ಆ ವ್ಯಕ್ತಿಯ ಮುಖವನ್ನು ಸಿನಿಮಾದಲ್ಲಿ ರಿವೀಲ್ ಮಾಡೋದೇ ಇಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಈಗ ಅವರು ಯಾರು ಗೊತ್ತಾ ? ಎಂಬ ವಿಷಯ ಭಾರೀ ಚರ್ಚೆ ಆಗುತ್ತಿದೆ. ಕೆಲವರು ವಿಜಯ್ ದೇವರಕೊಂಡ ಅಂದರೆ, ಇನ್ನೂ ಕೆಲವರು ಫಹಾದ್ ಫಾಸಿಲ್ ಎನ್ನುತ್ತಿದ್ದಾರೆ.

ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಎದುರಾಳಿ ವಿಲನ್ ಅಂದರೆ ಅದು ಫಹಾದ್ ಫಾಸಿಲ್. ಅವರಿಲ್ಲಿ ಎಸ್ಪಿ ಬನ್ವರ್ ಸಿಂಗ್ ಶೇಖಾವತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪುಷ್ಪರಾಜ್ ನಿಂದ ಅವಮಾನದ ಜೊತೆ ಹಿನ್ನೆಡೆ ಅನುಭವಿಸುವ ಶೇಖಾವತ್, ಸಿಟ್ಟಿಗೆ ತನ್ನನ್ನು ತಾನೇ ಸುಟ್ಟುಕೊಳ್ಳುತ್ತಾನೆ. ಆದರೆ, ಆ ಘಟನೆಯಲ್ಲಿ ಮಾತ್ರ ಆತ ಸಾವನ್ನಪ್ಪಿರುವುದಿಲ್ಲ ಎನ್ನಲಾಗುತ್ತಿದೆ. ಕೊನೆಯಲ್ಲಿ ಬಂದು ಪುಷ್ಪರಾಜ್ ಕುಟುಂಬದ ಖುಷಿಯನ್ನು ಹಾಳು ಮಾಡೋದು ಇದೇ ವ್ಯಕ್ತಿ ಅಂತ ಚರ್ಚೆ ಜೋರಾಗಿದೆ. ಆ ಘಟನೆಯಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯ ಕೈ ತೆಳ್ಳಗಿದೆ. ಆ ಕೈ ಮೇಲೆ ಸುಟ್ಟ ಗಾಯಗಳೂ ಇವೆ. ಹಾಗಾಗಿ, ಅದು ವಿಜಯ್ ದೇವರಕೊಂಡ ಅಲ್ಲ, ಶೇಖಾವತ್ ಬದುಕಿ, ಪುಷ್ಪರಾಜ್ ಕುಟುಂಬವನ್ನು ನಾಶ ಮಾಡೋಕೆ ಟ್ರೈ ಮಾಡಿದ್ದಾನೆ ಎನ್ನಲಾಗುತ್ತಿದೆ.

ಅದೇನೆ ಇರಲಿ, ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆ ಹರಿಬಿಟ್ಟು, ಕುತೂಹಲ ಕೆರಳಿಸಲಾಗಿತ್ತು. ಅದಕ್ಕೆ ಬಾಹುಬಲಿ2 ಸಿನಿಮಾದಲ್ಲಿ ಉತ್ತರವೂ ಸಿಕ್ಕಿತ್ತು. ಈಗ ಪುಷ್ಪ2 ನಲ್ಲಿ ಕ್ಲೈಮ್ಯಾಕ್ಸ್ ವೇಳೆ ಬರುವ ವ್ಯಕ್ತಿ ಯಾರು, ಬೆಂಕಿ ಇಡುವುದೇಕೆ? ಅವರು ನಿಜವಾಗಿಯೂ ಬನ್ವರ್ ಸಿಂಗ್ ಶೇಖಾವತ್ ಇರಬಹುದಾ? ವಿಜಯ್ ದೇವರಕೊಂಡ ಎಂಟ್ರಿಯಾಗಿ ಈ ಘಟನೆಗೆ ಕಾರಣವಾಗಿರಬಹುದಾ? ಅಥವಾ ಹೊಸ ಕ್ಯಾರೆಕ್ಟರ್ ಏನಾದ್ರೂ ಎಂಟ್ರಿಯಾಯ್ತಾ ? ಬಗ್ಗೆ ಪ್ರಶ್ನೆಗಳು, ಉತ್ತರಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಅದೇನೆ ಇದ್ದರು, ಹಾಗೊಂದು ವೇಳೆ ಪಾರ್ಟ್ 3 ಬಂದಲ್ಲಿ ಆ ಕ್ಯಾರೆಕ್ಟರ್ ರಿವೀಲ್ ಆಗಬಹುದಾ? ಕಾದು ನೋಡಬೇಕಿದೆ. ಅಲ್ಲಿಯವರೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಇವರು ಅನ್ನೋ ಚರ್ಚೆ ಮಾತ್ರ ನಿರಂತರವಾಗಿರುತ್ತೆ.

ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss