Movie News: ಸೆಲೆಬ್ರಿಟಿಗಳು ಅಂದ್ರೆ ಹಾಗೆ. ನಾವು ಮೊದಲು ನೋಡಿದಾಗ ಹೇಗಿದ್ದರೋ, ಅವರು ವಯಸ್ಸಾದರೂ ಅದೇ ರೀತಿ ಇದ್ದಾಗಲೇ, ಚೆಂದ. ಅವರಿಗೆ ವಯಸ್ಸಾಗಿ ಬಿಟ್ಟರೆ, ಮೂಲೆಗುಂಪಾದಂತೆ. ಹಾಗಾಗಿಯೇ ನಟ ನಟಿಯರು ಅದಷ್ಟು ಡಯಟ್ ಮಾಡಿ, ತಮ್ಮ ಯವ್ವನವನ್ನು ಮೆಂಟೇನ್ ಮಾಡಲು ಹೆಣಗಾಡುತ್ತಾರೆ.
ಆದರೆ ಇಲ್ಲೋರ್ವ ನಟಿ ಮುದ್ದುಮುದ್ದಾಗಿ, ಬಳಕುವ ಬಳ್ಳಿಯಂತಿದ್ದರು. ಆದರೆ ಸಡನ್ನಾಗಿಊದಿಕೊಂಡಿದ್ದು, ಇವರನ್ನು ನೋಡಿ ಜನ ಶಾಕ್ ಆಗಿದ್ದಾರೆ. ಕಮಲ್ ಹಾಸನ್ ಸಿನಿಮಾದ ಮೂಲಕ ತೆರೆ ಮೇಲೆ ಮಿಂಚಿದ್ದ ನಟಿ ನಿವೇಥಾ ಥಾಮಸ್, ಇದೀಗ ಸಿಕ್ಕಾಪಟ್ಟೆ ದಪ್ಪವಾಗಿ ಬಿಟ್ಟಿದ್ದಾರೆ. ಬಿಗ್‌ಬಾಸ್ ವೇದಿಕೆಗೆ, ಸಿನಿಮಾ ಪ್ರಮೋಷನ್‌ಗಾಗಿ ಬಂದಿದ್ದ ಇವರನ್ನು ಕಂಡು ಪ್ರೇಕ್ಷಕರು ದಂಗಾಗಿ ಹೋಗಿದ್ದಾರೆ.
ಹೂವಿನ ಹಾಗೆ ಇದ್ದ ನಿವೇಥಾ ಹೂಕೋಸಿನ ಹಾಗಾಗಿದ್ದಾರೆ ಅಂತಾ ಜನ ಮಾತನಾಡಿಕೊಂಡಿದ್ದು, ಆರೋಗ್ಯ ಹಾಳಾಗಿ ಈ ರೀತಿಯಾಗಿರಬೇಕು ಅಂತಾ ಅಂದುಕೊಂಡಿದ್ದರು. ಆದರೆ ನಿವೇಥಾ ಖುದ್ದು ಇದಕ್ಕೆ ಸ್ಪಷ್ಟನೆ ನೀಡಿದ್ದು, ನಾನು ಆರೋಗ್ಯವಾಾಗಿ, ಗಟ್ಟಿಮುಟ್ಟಾಗಿದ್ದೇನೆ. ಹೊಸ ಸಿನಿಮಾದಲ್ಲಿ ಎರಡು ಮಕ್ಕಳ ತಾಯಿ ಪಾತ್ರ ಮಾಡುವ ಕಾರಣಕ್ಕೆ, ನಾನು ಈ ರೀತಿ ದೇಹದ ತೂಕ ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ.
ಇನ್ನು ಕೆಲವರು ಈಕೆ ಸಿನಿಮಾಗಾಗಿ ಈ ರೀತಿ ದೇಹದ ತೂಕ ಹೆಚ್ಚಿಸಿಕೊಂಡಿದ್ದನ್ನು ಕಂಡು, ಭೇಷ್ ಎಂದಿದ್ದಾರೆ. ಅಲ್ಲದೇ, ಮೊದಲಿಗಿಂತಲೂ, ನೀವು ಈಗಲೇ ಬಲು ಮುದ್ದು ಮುದ್ದಾಗಿ ಕಾಣುತ್ತಿದ್ದೀರಿ ಎಂದಿದ್ದಾರೆ.