Political News: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕೆ.ಆರ್ ಪೇಟೆಯಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕುಮಾರಣ್ಣ ಅವರನ್ನು ಹೊರಗಿನವರು ಹೊರಗಿನವರು ಅಂತಾ ಹೇಳುತ್ತೀರಾ. ನಾನು ಓದುತ್ತಾ ಇದ್ದಿದ್ದು ಮಂಗಳೂರಲ್ಲಿ, ಕೆಲಸ ಮಾಡುತ್ತಿದುದು ಬೆಂಗಳೂರಲ್ಲಿ. ಆದರೆ ನನ್ನನ್ನು ಕೊಡಗು- ಮೈಸೂರು ಜನ ಸಂಸದರನ್ನಾಗಿ ಮಾಡಿದರು. ಅಲಹಾಬಾದ್‌ನಲ್ಲಿ ಹುಟ್ಟಿದಂಥ ಇಂದಿರಾಗಾಂಧಿ ಚಿಕ್ಕಮಗಳೂರಿಗೆ ಬಂದು ಚುನಾವಣೆಗೆ ನಿಲ್ಲಬಹುದು. ಇಟಲಿಯಲ್ಲಿ ಹುಟ್ಟಿದ ಸೋನಿಯಾ ಗಾಂಧಿ, ಬಳ್ಳಾರಿ ಎಲೆಕ್ಷನ್‌ಗೆ ನಿಲ್ಲಬಹುದು. ದೆಹಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ, ವಯನಾಡಲ್ಲಿ ಬಂದು ಚುನಾವಣೆಗೆ ನಿಲ್ಲಬಹುದು. ಆದರೆ ಕಾವೇರಿ ನೀರಿಗಾಗಿ ಹೋರಾಟ ಮಾಡಿ, ಕಾವೇರಿ ನಮ್ಮದು ಅಂತಾ ಪ್ರತಿಭಟಿಸಿ, ನೀರು ಕುಡಿಯಲು ಅವಕಾಶ ಮಾಡಿಕೊಟ್ಟ ಕುಮಾರಸ್ವಾಮಿ ಅವರು ಮಂಡ್ಯ ಸಂಸದರೇಕಾಗಬಾರದು..? ಅವರು ಹೇಗೆ ಹೊರಗಿನವರಾಗುತ್ತಾರೆ ಎಂದು ಪ್ರತಾಪ್ ಸಿಂಹ್ ಪ್ರಶ್ನಿಸಿದ್ದಾರೆ.
ಅಲ್ಲದೇ ದೇಶ ಕಾಯಲು ಮೋದಿ ಬೇಕು. ಕಾವೇರಿ ಕಾಯಲು ಕುಮಾರಣ್ಣ ಬೇಕು. ನೀವು ಕುಮಾರಣ್ಣನನ್ನು ಸಂಸದರನ್ನಾಗಿ ಮಾಡಿದ್ರೆ, ನಾವು ಅವರನ್‌ನು ಕೇಂದ್ರ ಸಚಿವರನ್‌ನಾಗಿ ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ..
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಬ್ಯಾಡ್ಮಿಂಟನ್ ತಾರೆ ಸೈನಾ
ಇದ್ರು ,ಹೋದ್ರು ನನಗೆ ಮಂಡ್ಯ ಸಾಕು. ಸ್ವಾರ್ಥ ಅನ್ನೋದು ಇದ್ರೆ ಮಂಡ್ಯ ಮಾತ್ರ: ಸಂಸದೆ ಸುಮಲತಾ ಅಂಬರೀಷ್