Political News: ಮಂಡ್ಯ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟಿದ್ದು, ಸುಮಲತಾ ಅಂಬರೀಷ್ ಚುನಾವಣೆಗೆ ನಿಲ್ಲುತ್ತಾರೋ ಇಲ್ಲವೋ, ನಿಂತರೆ ಯಾವ ಕ್ಷೇತ್ರದಿಂದ ನಿಲ್ಲುತ್ತಾರೆ ಅನ್ನೋ ಪ್ರಶ್ನೆ ಕಾಡುತ್ತಿತ್ತು.
ದೆಹಲಿಗೆ ಹೋಗಿ ಬಂದಿರುವ ಸುಮಲತಾ ಅಂಬರೀಷ್, ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ತಾನು ಸ್ಪರ್ಧಿಸುವುದಿಲ್ಲವೆಂದಿದ್ದಾರೆ. ದೆಹಲಿಗೆ ಹೋಗಿ, ಒಂದಿಷ್ಟು ಚರ್ಚೆ ಮಾಡಿದ್ದೇವೆ. ಯಾವುದೇ ಅಂತಿಮ ನಿರ್ಧಾರವಾಗಿಲ್ಲ. 22ನೇ ತಾರೀಖಿನವರೆಗೂ ಯಾವುದೂ ಅಂತಿಮವಾಗುವುದಿಲ್ಲ. ಅದಾದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುಮಲತಾ ಹೇಳಿದ್ದಾರೆ.
ಇನ್ನು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಬೇರೆಯವರು ಆ ರೀತಿಯ ಸಲಹೆ, ಪ್ರಸ್ತಾಪ ಮಾಡುತ್ತಿದ್ದಾರೆ. ಆದರೆ ನಾನು ಮಂಡ್ಯ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಯಾಕೆ ಹೋಗಲಿ..? ರಾಜಕೀಯ ಏನಿದ್ರೂ ಮಂಡ್ಯದಲ್ಲೇ ಅಂತಾ ಹೇಳಿದ್ದೆ. ಈಗಲೂ ನಾನು ಅದನ್ನೇ ಹೇಳ್ತೀನಿ ಎಂದಿದ್ದಾರೆ.
ಇನ್ನು ಪ್ರಧಾನಿ ಮೋದಿ ಕೂಡ ಬಿಡುವಲ್ಲದ ಸಮಯದಲ್ಲೂ ಸುಮಲತಾ ಅವರನ್ನು ಕರೆಸಿಕೊಂಡು ಮಾತಾಡಿ ಎಂದಿದ್ದಾರೆ. ಅದಕ್ಕಾಗಿ ನಿಮ್ಮನ್ನು ಕರೆಸಿದ್ದು ಅಂತಾ ಖುದ್ದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೇ ಹೇಳಿದ್ದಾರೆ. ಪಕ್ಷದಲ್ಲ ನನ್ನ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ನೀವು ಪಕ್ಷದಲ್ಲಿ ಉಳಿಯಬೇಕು. ನಿಮ್ಮಂಥ ಲೀಡರ್ಸ್ ಅವಶ್ಯಕತೆ ನಮಗಿದೆ ಎಂದಿದ್ದಾರೆ. ಪಕ್ಷ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣವೆಂದು ಸುಮಲತಾ ಹೇಳಿದ್ದಾರೆ.
ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.
ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..