ಆದಿಚುಂಚನಗಿರಿಗೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಸಂಸದೆ ಸುಮಲತಾ ಅಂಬರೀಷ್

Political News: ಸಂಸದೆ ಸುಮಲತಾ ಅಂಬರೀಷ್ ಲೋಕಸಭೆ ಚುನಾವಣೆ ಟೀಕೇಟ್ ಘೋಷಣೆಗೂ ಮುನ್ನ ಆದಿಚುಂಚನಗಿರಿಗೆ ಭೇಟಿ ನೀಡಿ, ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಈ ಮೊದಲು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದ ಸುಮಲತಾ, ನಾನು ಲೋಕಸಭೆ ಚುನಾವಣೆಗೂ ಮುನ್ನ ಆದಿಚುಂಚನಗಿರಿಗೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದು, ಬಳಿಕ ಪ್ರಚಾರ ಪ್ರಾರಂಭಿಸುವುದಾಗಿ ಹೇಳಿದ್ದರು. ಅದೇ ರೀತಿ ಇಂದು ಆಧಿಚುಂಚನಗಿರಿಗೆ ಭೇಟಿ ನೀಡಿ, ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ಪಡೆಯಲು ಸುಮಲತಾ ಕಸರತ್ತು ನಡೆಸುತ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಅಲ್ಲದೇ, ಅದಕ್ಕಾಗಿ ಪ್ರಧಾನಿ ಮೋದಿಯವರನ್ನು ಸಹ ಸುಮಲತಾ ಭೇಟಿ ಮಾಡಿ, ಮಾತನಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಒಟ್ಟಿಗೆ ಸೇರಿ ಚುನಾವಣೆಯನ್ನು ಎದುರಿಸೋಣ ಎಂದಿದ್ದಾರೆ.

ಲೋಕಸಭೆ ಚುನಾವಣೆಗೆ ಟಿಕೇಟ್ ಸಿಗಲಿ ಸಿಗದಿರಲಿ, ಸ್ಪರ್ಧೆ ಅಂತೂ ಖಚಿತ ಅಂತಲೂ ಸುಮಲತಾ ಹೇಳಿದ್ದಾರೆ. ಇನ್ನೊಂದೆಡೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌, ಮಂಡ್ಯ ಟಿಕೇಟ್ ತಮಗೇ ಕೊಡಬೇಕು ಎಂದಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ರಿಲೀಸ್ ಆದ್ರೂ ಕೂಡ, ಅದರಲ್ಲಿ ಕರ್ನಾಟಕದಲ್ಲಿ ಯಾರಿಗೆ ಟಿಕೇಟ್ ಕೊಡಲಿದ್ದಾರೆ ಅನ್ನೋದು ಘೋಷಣೆಯಾಗಿಲ್ಲ. ಎರಡನೇಯ ಪಟ್ಟಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ಹಣೆಬರಹ ಗೊತ್ತಾಗಲಿದೆ.

ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..

ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು

ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ರಿಲೀಸ್

About The Author