Tuesday, October 15, 2024

Latest Posts

ಸಂಸತ್ ನಲ್ಲಿ ಸುಮಲತಾ ಮಾತು- ಲೋಕಸಭೆಯಲ್ಲಿ ಕನ್ನಡದ ಕಂಪು..!

- Advertisement -

ನವದೆಹಲಿ: ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿರೋ ಸಂಸದೆ ಸುಮಲತಾ ಕ್ಷೇತ್ರದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ರು. ಅಲ್ಲದೆ ರೈತರಿಗೆ ನೀಡಿದ್ದ ಭರವಸೆ ಈಡೇರಿಸದ ರಾಜ್ಯ ಸರ್ಕಾರದ ವೈಫಲ್ಯತೆಯನ್ನೂ ಸಂಸತ್ ನಲ್ಲಿ ಸ್ವಾಭಿಮಾನಿ ಸುಮಲತಾ ಎತ್ತಿತೋರಿದ್ರು.

ಕನ್ನಡದಲ್ಲಿ ಮೊದಲು ಮಾತು ಶುರುಮಾಡಿದ ಸಂಸದೆ ಸುಮಲತಾ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದ ಅರ್ಪಿಸಿದ್ರು. ಬಳಿಕ ಮಾತನಾಡಿದ ಅವರು ಕಳೆದ ವರ್ಷದಿಂದ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಬರಗಾಲದ ಪರಿಸ್ಥಿತಿ ಆವರಿಸಿದೆ. ಆದ್ರೆ ಈ ವರ್ಷ ರಾಜ್ಯದಲ್ಲಿ ಅತೀವವಾದ ನೀರಿನ ಸಮಸ್ಯೆ ಎದುರಾಗಿದ್ದು ರಾಜ್ಯದ ರೈತರು ಅದರಲ್ಲೂ ಕಬ್ಬು ಮತ್ತು ಭತ್ತ ಬೆಳೆಯುತ್ತಿರೋ ನನ್ನ ಕ್ಷೇತ್ರದ ಜನತೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತಿ ಮುಖ್ಯವಾಗಿ ರೈತರು ಅವಲಂಭಿಸಿರೋ ಬೆಳೆಗಳು ಮಳೆಯಿಲ್ಲದೆ ಕೈ ಕೊಟ್ಟಿರೋದ್ರಿಂದ ಬ್ಯಾಂಕ್ ಗಳಿಂದ ತೆಗೆದುಕೊಂಡ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬರಬೇಕಿದ್ದ ಹಣ ಕೂಡ ರೈತರಿಗೆ ತಲುಪದೆ ಪರಾದಾಡುತ್ತಿದ್ದಾರೆ. ಇನ್ನು ರಾಜ್ಯ ಸರ್ಕಾರ ಸಾಲ ಮನ್ನಾ ಕುರಿತಾಗಿ ಭರವಸೆ ಈಡೇರಿಸಲು ವಿಫಲರಾಗಿ ರೈತರನ್ನು ಮತ್ತಷ್ಟು ಹೈರಾಣಾಗಿಸಿದೆ ಅಂತ ರಾಜ್ಯ ಸರ್ಕಾರದ ವೈಫಲ್ಯತೆಯನ್ನು ಸಂಸತ್ ನಲ್ಲಿ ಸುಮಲತಾ ಎತ್ತಿತೋರಿದ್ರು.

ಇನ್ನು ಕುಡಿಯೋ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಸೇರಿದಂತೆ ರಾಜ್ಯದ ಲಕ್ಷಾಂತರ ರೈತರನ್ನು ಕಾಡುತ್ತಿರೋ ಜ್ವಲಂತ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನ ಹರಿಸಬೇಕು ಎಂದು ನಾನು ಮನವಿ ಮಾಡ್ತೇನೆ. ಪರಿಹಾರ ಕ್ರಮಗಳನ್ನು ಜಾರಿಗೊಳಿಸಿ ಅನ್ನದಾತರು ಗೌರವಯುತವಾಗಿ ಬದುಕುವಂತೆ ಮಾಡಬೇಕು. ಈ ಎಲ್ಲಾ ಸಮಸ್ಯೆಗಳಿಗೂ ಮುಂಗಾರು ಮಳೆ ಹೊಣೆಯಾಗೋದಲ್ಲದೆ, ಸಮಸ್ಯೆ ಬಗೆಹರಿಸಲು ವಿಫಲರಾದಲ್ಲಿ ನಾವೂ ಕೂಡ ಇದಕ್ಕೆ ಕಾರಣರಾಗಬೇಕಾಗುತ್ತೆ ಅಂತ ಮನದಟ್ಟು ಮಾಡಿಕೊಡುವ ಮೂಲಕ ಸಂಸದೆ ಸುಮಲತಾ ರಾಜ್ಯದ ಜನತೆಯ ಮನಗೆದ್ದಿದ್ದಾರೆ.

ನನಗೂ ಸುಮಲತಾಗೂ ಹೋಲಿಕೆ ಬೇಡ ಅಂತ ಉಪ್ಪಿ ಹೇಳಿದ್ದ್ಯಾಕೆ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=L-t37GY0-_I
- Advertisement -

Latest Posts

Don't Miss