ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವರ್ಲ್ಡ್ ಕಪ್ ಬಳಿಕ ನಿವೃತ್ತಿ ಪಡೆಯೋ ವಿಚಾರ ಬಗ್ಗೆ ಚರ್ಚೆಯಾಗುತ್ತಿರೋ ಮಧ್ಯೆ ಇದೀ ಖುದ್ದು ಮಹೀ ಅಭಿಮಾನಿಗಳಿಗೆ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗಾಗಿ ವಿಡಿಯೋ ಪೋಸ್ಟ್ ಮಾಡಿರೋ ಮಹೀ, ನಾನು ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದೆ, ನಾನು ಪೇಂಟರ್ ಆಗಬೇಕೆಂಬ ಕನಸುಕಂಡಿದ್ದೆ. ಆದ್ರೆ ನಾನು ಕ್ರಿಕೆಟ್ ನಲ್ಲೇ ಬಹಳ ಸಮಯ ಕಳೆದಿದ್ದೇನೆ. ಇದೀಗ ನಾನು ನನ್ನಿಷ್ಟದ ಕೆಲಸ ಮಾಡೋ ಸಮಯ ಬಂದಿದೆ. ನಾನೀಗ ಪೇಂಟಿಂಗ್ ನತ್ತ ಸಮಯ ಕಳೆಯುತ್ತಿದ್ದೇನೆ. ಇದನ್ನೇ ವೃತ್ತಿಯನ್ನಾಗಿಸಿಕೊಳ್ಳಬೇಕೆಂಬ ಆಸೆ ಇದ್ದು ಅದಕ್ಕಾಗಿ ತುಂಬಾ ಸಮಯ ಇದೆ. ನನ್ನ ಮೊದಲ ಆರ್ಟ್ ಎಕ್ಸಿಬಿಷನ್ ಗೂ ಕೂಡ ತಯಾರಿ ನಡೆಸುತ್ತಿದ್ದೇನೆ ನಿಮಗಾಗಿ ಕೆಲ ಚಿತ್ರಗಳನ್ನು ತೋರಿಸುತ್ತಿದ್ದೇನೆ. ನಾನು ಬಿಡಿಸಿದ ಈ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಅಂತಲೂ ಮಹೀ ಹೇಳಿದ್ದಾರೆ.
ಮಹೀ ಪೋಸ್ಟ್ ಮಾಡಿರೋ ವಿಡಿಯೋ ಇದೀಗ ವೈರಲ್ ಆಗಿದ್ದು, ಧೋನಿ ಮಾತ್ರ ಸೈಲೆಂಟ್ ಆಗಿಯೇ ನಿವೃತ್ತಿ ಚರ್ಚೆಯನ್ನು ಮತ್ತೆ ಬಡಿದೆಬ್ಬಿಸಿದ್ದಾರೆ.
ಅಫ್ರಿದಿಯನ್ನು ಮೆಂಟಲ್ ಮಾಡಿಬಿಟ್ರಾ ಗಂಭೀರ್…? ಈ ವಿಡಿಯೋದಲ್ಲಿದೆ ಸಂಪೂರ್ಣ ಮಾಹಿತಿ. ತಪ್ಪದೇ ನೋಡಿ