Saturday, July 27, 2024

Latest Posts

ಆಮೆಗತಿಯಲ್ಲಿ ಸಾಗುತ್ತಿದೆ ಬಹುಕೋಟಿಯ ಬೈಪಾಸ್ ಕಾಮಗಾರಿ – ಮೃತ್ಯುಕೂಪವಾಗಿ ಕಾದುಕೂತ ಹೆದ್ದಾರಿ

- Advertisement -

Hubli News: ಹುಬ್ಬಳ್ಳಿ : ಅದು ನಿಜಕ್ಕೂ ಸಾವಿನ ಹೆದ್ದಾರಿ. ಈ ಹೆದ್ದಾರಿಗೆ ಸಿಗುತ್ತಿಲ್ಲ ಇನ್ನೂ ಮುಕ್ತಿ, ಕುಂಟುತ್ತಾ ಸಾಗಿದ ರಸ್ತೆಯ ಕಾಮಗಾರಿ, ದಿನನಿತ್ಯ ಬಲಿ ತೆಗೆದುಕೊಳ್ಳುತ್ತಿದೆ. ಈ ರಸ್ತೆಗೆ ಇನ್ನೇಷ್ಟೂ ಬಲಿ ಬೇಕು..? ಮೃತ್ಯುಕೂಪವಾಗಿ ಕಾದು ಕುಳಿತಿದೆ. ಕಳೆದೊಂದು ದಶಕದಲ್ಲಿ ಇಲ್ಲಿ ನಡೆದ ಅಪಘಾತ ಹಾಗೂ ಸಾವಿನ ಸಂಖ್ಯೆಗಳನ್ನು ನೋಡಿದರೆ ಎದೆ ಝಲ್ ಎನ್ನುತ್ತದೆ.

ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ.  ಧಾರವಾಡ ಜಿಲ್ಲೆಯಲ್ಲಿ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿ 4 ಬೆಂಗಳೂರಿನಿಂದ ಪೂನಾಕ್ಕೆ ತಲುಪೋ ಈ ಹೆದ್ದಾರಿ ಹುಬ್ಬಳ್ಳಿ-ಧಾರವಾಡ ಎರಡಕ್ಕೂ ಹೊರಭಾಗದಲ್ಲಿ ಸಂಪರ್ಕ ಹೊಂದಿದೆ. ಇಂಥಹ ರಸ್ತೆ ಧಾರವಾಡದ ನರೇಂದ್ರ ಬೈಪಾಸ್ ನಿಂದ ಹುಬ್ಬಳ್ಳಿಯ ಗಬ್ಲೂರು ಕ್ರಾಸ್ ವರೆಗೆ ಕಿರಿದಾಗಿರೋದ್ರಿಂದಾಗಿ ಸಾವಿನ ರಸ್ತೆಯಾಗಿ ಪರಿಣಮಿಸಿದೆ. ಕಳೆದ ಹದಿಮೂರು ವರ್ಷಗಳ ಅವಧಿಯಲ್ಲಿ ಇಲ್ಲಿ ನಡೆದ ಅಪಘಾತಗಳ ಸಂಖ್ಯೆ ನೋಡಿದ್ರೆ ಎದೆ ಝಲ್ ಎನ್ನುತ್ತದೆ. ಹೀಗಿದ್ದರೂ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಷಟ್ನಥ ಎಕ್ಸ್‌ಪ್ರೆಸ್ ಹೈವೇ ಜೊತೆಗೆ ನಾಲ್ಕು ಪಥ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಒಟ್ಟು 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಲಾಗುತ್ತಿದೆ. 2022 ಫೆಬ್ರವರಿ 28 ರಂದು ಕಾಮಗಾರಿಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಶಂಕುಸ್ಥಾಪನೆ ಮಾಡಿದ್ದರು.

ಆದ್ರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ. ಬಹುತೇಕ ವಾಹನ ಹಾಗೂ ಕಾಮಗಾರಿ ಸ್ಥಗಿತಗೊಂಡಿದ್ದು, ಈಗಾಗಲೇ ಡಾಂಬರೀಕರಣಗೊಂಡ ರಸ್ತೆಯಲ್ಲಿ ಗೂಡಂಗಡಿಗಳು ತಲೆಯೆತ್ತಿದ್ದು, ನಿಜಕ್ಕೂ ಏನಿದು ಯೋಜನೆ ಅಂತ
ನೋಡುವಂತಾಗಿದೆ.

ಮೇಲ್ಮನೆ ಚುನಾವಣೆ: ಜವರಾಯಿಗೌಡರ ಪರ ಜೆಡಿಎಸ್ ವರಿಷ್ಠರ ಒಲವು..?

ನಟಿ ಆಲಿಯಾ ಭಟ್‌ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಭಾರತ ಬಿಟ್ಟು ತೊಲಗು ಎಂದು ಆಕ್ರೋಶ

ಮಗುವಿನ ಲಿಂಗ ಪತ್ತೆಯ ಖುಷಿಗೆ ಪಾರ್ಟಿ ಆಚರಿಸಿದ ಯೂಟ್ಯೂಬರ್‌ಗೆ ಆರೋಗ್ಯ ಇಲಾಖೆಯಿಂದ ನೊಟೀಸ್

- Advertisement -

Latest Posts

Don't Miss