ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಿದೇ ತೀರುತ್ತೇನೆ ಅಂತ ಪಟ್ಟು ಹಿಡಿದು ರಿನೈಸೆನ್ಸ್ ಹೋಟೆಲ್ ಮುಂಭಾಗ ಕುಳಿತಿದ್ದ ಸಚಿವ ಡಿ.ಕೆ ಶಿವಕುಮಾರ್ ರನ್ನು ಇದೀಗ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಯಿಂದಲೂ ಮುಂಬೈನ ರಿನೈಸೆನ್ಸ್ ಹೋಟೆಲ್ ಮುಂಭಾಗ ಇತರೆ ಶಾಸಕರೊಂದಿಗೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆಶಿಯವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮ್ಮನ್ನು ಭೇಟಿ ಮಾಡಲು ಇಷ್ಟವಿಲ್ಲವೆಂದು ಅತೃಪ್ತರು ಸ್ಪಷ್ಟವಾಗಿ ಹೇಳಿದ ಬಳಿಕವೂ ಡಿಕೆಶಿ ತಮ್ಮ ಪಟಾಲಂನೊಂದಿಗೆ ಹೋಟೆಲ್ ಮುಂಭಾಗವೇ ಕುಳಿತಿದ್ರು. ಇನ್ನು ಬಿಜೆಪಿ ಕಾರ್ಯಕರ್ತರು ಡಿಕೆಶಿ ನಡೆ ವಿರೋಧಿಸಿ ಗೋ ಬ್ಯಾಕ್ ಡಿಕೆಶಿ ಅಂತ ಪ್ರತಿಭಟನೆಯನ್ನೂ ನಡೆಸುತ್ತಿದ್ರು. ಆದ್ರೆ ಯಾವುದೇ ಕ್ಷಣದಲ್ಲಾದ್ರೂ ಪರಿಸ್ಥಿತಿ ಹದಗೆಡಬಹುದು ಅಂತ ಮುಂಜಾಗೃತಾ ಕ್ರಮವಾಗಿ ಮುಂಬೈ ಪೊಲೀಸರು ಇದೀಗ ಸಚಿವ ಡಿ.ಕೆ ಶಿವಕುಮಾರ್ ರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಡಿಕೆಶಿ ಜೊತೆಗಿದ್ದ ಇತರೆ ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ, ಜಿ.ಟಿ ದೇವೇಗೌಡರನ್ನು ಮಾತ್ರ ಪೊಲೀಸರು ವಶಕ್ಕೆ ಪಡೆದಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ನನಗೆ ಸ್ನಾನ ಮಾಡುವುದಕ್ಕಾಗಲಿ ಊಟ ಮಾಡುವುದಕ್ಕಾಗಲೀ ಯಾವುದೇ ಸೌಲಭ್ಯ ನೀಡದೆ ಇರೋದರ ಹಿಂದೆ ಬಿಜೆಪಿ ಕೈವಾಡವಿದೆ. ಆದ್ರೂ ಪರವಾಗಿಲ್ಲ ನಾನು ಹೋಟೆಲ್ ಒಳಗಿರುವ ಅತೃಪ್ತರನ್ನು ಭೇಟಿ ಮಾಡೇ ಮಾಡ್ತೀನಿ ಅಂತ ಡಿಕೆಶಿ ವಿಶ್ವಾಸದಿಂದ ನುಡಿದಿದ್ದಾರೆ.
ಬಿಜೆಪಿ ರಣತಂತ್ರ, ದೋಸ್ತಿ ಅತಂತ್ರ..! ಮಿಸ್ ಮಾಡದೇ ಈ ವಿಡಿಯೋ ನೋಡಿ