Hubli News: ಹುಬ್ಬಳ್ಳಿ: ನಾನೊರ್ವ ಕಾಂಗ್ರೆಸ್ ಪಕ್ಷದ ಪ್ರತಿನಿಧಿ, ಪಕ್ಷವೆಂದು ಬಂದಾಗ ಪಕ್ಷದ ಅಭ್ಯರ್ಥಿಗಳ ಪರವಾಗಿ ನಾನು ಹಿತಕಾಯಬೇಕಾಗಿರೋದು ನನ್ನ ಕರ್ತವ್ಯ, ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ನೇಹಾ ತಂದೆ ಹಾಗೂ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾನು ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃನಾಲ ಹೆಬ್ಬಾಳ್ಕರ್ ಗೆಲುವು ಸಾಧಿಸಲಿ ಎಂದು ಹೇಳಿಕೆ ನೀಡಿದ್ದೇನೆ. ಅವರಷ್ಟೆ ಅಲ್ಲ ರಾಜ್ಯದ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿ ಎಂಬುದು ನನ್ನ ಇಚ್ಚೆಯಾಗಿದೆ ಎಂದರು.
ನೇಹಾ ತಂದೆಯಾಗಿ ನನ್ನ ಹೋರಾಟ ಪಕ್ಷಾತೀತವಾಗಿದ್ದು, ಈ ಹೋರಾಟಕ್ಕೂ ಮತ್ತು ನನ್ನ ರಾಜಕೀಯ ಹೇಳಿಕೆಗಳಿಗೂ ಯಾವುದೇ ಸಂಬಂಧವಿಲ್ಲ, ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿರಂತರಾವಾಗಿರುತ್ತದೆ ಎಂದರು.
ಈ ಹಿಂದೆ ಸಿಎಂ ಭೇಟಿಯಾದ ಸಂದರ್ಭದಲ್ಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದೇನೆ. ಹಾಗೂ ತೀವ್ರ ಗತಿಯಲ್ಲಿ ಪ್ರಕರಣ ನಡೆಸುವಂತೆ ಒತ್ತಾಯಿಸಿದ್ದೆ, ಸರ್ಕಾರ ಈ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಹಿಂದೆ ನಾ ನೀಡಿದ ದೂರಿನಲ್ಲಿ ಇದರ ಹಿಂದೆ ಇನ್ನು ಹಲವಾರು ಭಾಗಿಯಾಗಿರುವ ಕುರಿತು ಕೆಲವರ ಹೆಸರುಗಳನ್ನು ತಿಳಿಸಿದ್ದೆ. ಆದರೆ ಈವರೆಗೆ ಆರೋಪಿಯೊರ್ವನನ್ನೇ ಬಂಧಿಸಲಾಗಿದೆ. ಉಳಿದವರ ಬಂಧನವಾಗಲಿ ಅಥವಾ ತನಿಖೆಯಾಗಲಿ ನಡೆದಿಲ್ಲ. ಇದು ನನಗೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಕಾಂಗ್ರೆಸ್ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ: ಕೇಂದ್ರ ಸಚಿವ ಜೋಶಿ
ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ

