Monday, December 11, 2023

Latest Posts

ರಾಕಿಂಗ್ ಸ್ಟಾರ್ ಯಶ್-ರಾಧಿಕಾರ ಅದೃಷ್ಟ ದೇವತೆಯ ನಾಮಕರಣ..!

- Advertisement -

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ಫರ್ಸ್ಟ್ ಲುಕ್ ನಿಂದ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿಗೆ ನಾಳೆ ನಾಮಕರಣ ನಡೆಯಲಿದೆ.

ಮುದ್ದು ಮುದ್ದಾದ ಯಶ್ ಮಗುವಿಗೆ ಯಾವ ಹೆಸರಿಟ್ರೆ ಚೆನ್ನಾಗಿರುತ್ತೆ ಅಂತ ತಾವೇ ಚರ್ಚೆ ಮಾಡಿಕೊಳ್ತಿದ್ದ ಅಭಿಮಾನಿಗಳು ಯಶ್ ದಂಪತಿಗೆ ಕೆಲ ಹೆಸರುಗಳನ್ನೂ ಸಜೆಸ್ಟ್ ಮಾಡಿದ್ರು. ಇನ್ನೂ ಕೆಲವರು ಮಗುವಿಗೆ ತಾವೇ ಯಶಿಕಾ ಅಂತ ನಾಮಕರಣ ಮಾಡಿಕೊಂಡಿದ್ದು. ಆದ್ರೆ ಯಶ್ ಮಾತ್ರ ತಮ್ಮ ಪುತ್ರಿಗೆ ವೈ.ಆರ್ ಬೇಬಿ (ಯಶ್ ರಾಧಿಕಾ ಬೇಬಿ) ಅಂತ ಶಾರ್ಟ್ ಮತ್ತು ಸ್ವೀಟ್ ಆಗಿ ಕರೆಯೋಣ ಅಂತ ಹೇಳಿದ್ರು. ಆದ್ರೆ ನಾಳೆ ಈ ಕ್ಯೂಟ್ ವೈ ಆರ್ ಬೇಬಿಗೆ ನಾಮಕರಣವಾಗಲಿದ್ದು, ಅಭಿಮಾನಿಗಳು ಈ ಕ್ಯೂಟಿಯ ಹೆಸರು ತಿಳಿದುಕೊಳ್ಳೋದಕ್ಕೆ ಕಾಯ್ತಾಯಿದ್ದಾರೆ.

ತಮ್ಮ ಪುಟ್ಟ ಅದೃಷ್ಟ ದೇವತೆಯ ನಾಮಕರಣದ ಕುರಿತಾಗಿ ಟ್ವೀಟ್ ಮಾಡಿರೋ ನಟ ರಾಕಿಂಗ್ ಸ್ಟಾರ್ ಯಶ್,-‘ಹಾಯ್ ನನಗೆ ಹೆಸರಿಡುವ ಸಮಯ ಬಂದಿದೆ. ನೀವೆಲ್ಲಾ ನನಗೆ ತುಂಬಾ ಚೆಂದದ ಹೆಸರುಗಳನ್ನು ನನಗೋಸ್ಕರ ಆಯ್ಕೆ ಮಾಡಿದ್ರಿ. ಅವುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ನನ್ನ ತಂದೆ ತಾಯಿ ನನಗೊಂದು ಮುದ್ದಾದ ಹೆಸರನ್ನಿಡ್ತಿದ್ದಾರೆ. ಆ ಹೆಸರೇನು ಅಂತ ತಿಳ್ಕೊಬೇಕಾದ್ರೆ ನಾಳೆ ವರೆಗೂ ಕಾಯಲೇ ಬೇಕು’ ಅಂತ ತಮ್ಮ ಪುತ್ರಿ ಟ್ವೀಟ್ ಮಾಡೋ ರೀತಿ ಬರೆದುಕೊಂಡಿದ್ದಾರೆ.

ಅಭಿಮಾನಿಯೊಬ್ಬರು ಎಡಿಟ್ ಮಾಡಿರುವ ಯಶ್ ಪುತ್ರಿಯ ಫೋಟೋ
ಯಶ್ ದಂಪತಿ ರಿಲೀಸ್ ಮಾಡಿದ್ದ ತಮ್ಮ ಪುತ್ರಿಯ ಫರ್ಸ್ಟ್ ಲುಕ್

ತಮ್ಮ ಪುಟ್ಟ ಅದೃಷ್ಟ ದೇವತೆ ಬಗ್ಗೆ ರಾಕಿಂಗ್ ಸ್ಟಾರ್ ಏನ್ ಹೇಳಿದ್ದಾರೆ ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=05GGf4Z357Q
- Advertisement -

Latest Posts

Don't Miss