Monday, July 22, 2024

Latest Posts

ಶುರುವಾಗಿದೆ ಮೋದಿ 2ನೇ ಇನ್ನಿಂಗ್ಸ್- ಬೆಟಾಲಿಯನ್ ನಲ್ಲಿ ಯಾರ್ ಯಾರ್ ಇದ್ದಾರೆ…?

- Advertisement -

ನವದೆಹಲಿ: 2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಪ್ರಮಾಣವಚನ ಸ್ವೀಕರಿಸಿದ್ರು. ನವದೆಹಲಿಯ ರಾಷ್ಟ್ರಪತಿ ಭವನದೆದುರಿನ ಫೋರ್ ಕೋರ್ಟ್ ನಲ್ಲಿ ಸಜ್ಜಾಗಿದ್ದ ಬೃಹತ್ ವೇದಿಕೆಯಲ್ಲಿ ಮೋದಿ ಸೇರಿದಂತೆ 58 ಮಂದಿ ಕೇಂದ್ರ ಸಚಿವರು ಪ್ರಮಾಣವಚನ ಸ್ವೀಕರಿಸಿದ್ರು.

ಇವತ್ತು ನವದೆಹಲಿಯ ರಾಷ್ಟ್ರಪತಿ ಭವನದೆದುರು ಹಬ್ಬದ ಸಂಭ್ರಮ. ಎಲ್ಲೆಡೆ ಮೋದಿ ಮೋದಿ ಎಂಬ ಕೂಗು ಕವಿಗಡಚಿಕ್ಕುತ್ತಿತ್ತು. ಸರಿಯಾಗಿ ಸಂಜೆ 7 ಗಂಟೆಗೆ ಆರಂಭವಾದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಮೊದಲಿಗೆ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಜ್ಞಾವಿಧಿ ಬೋಧಿಸಿದ್ರು.

ಈಶ್ವರ ಹೆಸರಿನಲ್ಲಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ್ರು. ಸರಳವಾಗಿ ನಡೆದ ಈ ಪ್ರಮಾಣವಚನ ಸಮಾರಂಭದಲ್ಲಿ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ, ರಾಜನಾಥ್ ಸಿಂಗ್,ಅಮಿತ್ ಶಾ,ನಿತಿನ್ ಗಡ್ಕರಿ,ಡಿ.ವಿ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ರಾಮ್ ವಿಲಾಸ್ ಪಾಸ್ವಾನ್, ನರೇಂದ್ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್,ಹರ್ ಸಿಮ್ರತ್ ಕೌರ್ ಬಾದಲ್, ಥಾವರ್ ಚಂದ್ ಗೆಹ್ಲೋಟ್,ಸುಬ್ರಮಣ್ಯಂ ಜೈಶಂಕರ್, ಡಾ.ರಮೇಶ್ ಪೋಖ್ರಿಯಾಲ್ ನಿಶಾಂತ್, ಅರ್ಜುನ್ ಮುಂಡಾ,ಸ್ಮೃತಿ ಇರಾನಿ, ಡಾ.ಹರ್ಷವರ್ಧನ್,ಪ್ರಕಾಶ್ ಜಾವಡೇಕರ್,ಪಿಯೂಶ್ ಗೋಯಲ್, ಧರ್ಮೇಂದ್ರ ಪ್ರಧಾನ್, ಮುಕ್ತಾರ್ ಅಬ್ಬಾಸ್ ನಕ್ವಿ,ಪ್ರಹ್ಲಾದ್ ಜೋಶಿ, ಮಹೇಂದ್ರನಾಥ್ ಪಾಂಡೆ, ಡಾ. ಅರವಿಂದ್ ಗಣಪತ್ ಸಾವಂತ್, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೆಖಾವತ್ ಪ್ರಮಾಣ ವಚನ ಸ್ವೀಕರಿಸಿದ್ರು.

ಇನ್ನು ಕೇಂದ್ರದ ಸ್ವತಂತ್ರ ಖಾತೆ ಸಚಿವರಾಗಿ ಸಂತೋಷ್ ಗಂಗ್ವಾರ್, ಇಂದ್ರಜಿತ್ ಸಿಂಗ್,ಶ್ರೀಪಾದ್ ಯಶೋ ನಾಯಕ್, ಡಾ.ಜಿತೇಂದ್ರ ಸಿಂಗ್, ಕಿರಣ್ ರಿಜಿಜು,ಪ್ರಹ್ಲಾದ್ ಸಿಂಗ್ ಪಟೇಲ್, ಆರ್.ಕೆ. ಸಿಂಗ್, ಹರ್ದೀಪ್ ಸಿಂಗ್, ಮನ್ ಸುಖ್ ಮಾಂಡವೀಯಾ ಪ್ರಮಾಣವಚನ ಸ್ವೀಕರಿಸಿದ್ರು.

ಇನ್ನು ಕೇಂದ್ರ ರಾಜ್ಯ ಸಚಿವರಾಗಿ ಫಗನ್ ಸಿಂಗ್ ಕುಲಸ್ತೆ, ಅಶ್ವಿನಿ ಕುಮಾರ್ ಚೌಬೆ, ಅರ್ಜನ್ ಮೇಘವಾಲ್ , ವಿ.ಕೆ ಸಿಂಗ್, ಕೃಷ್ಣಪಾಲ್ ಗುರ್ಜರ್, ರಾವ್ ಸಾಬ್ ದಾದಾರಾವ್, ಜಿ.ಕಿಶನ್ ರೆಡ್ಡಿ, ಪುರುಷೋತ್ತಮ್ ರೂಪಾಲ, ಸಾಧ್ವಿ ನಿರಂಜನ್ ಜ್ಯೋತಿ , ಬಾಬುಲ್ ಸುಪ್ರಿಯೋ,ಸಂಜೀವ್ ಬಾಲ್ಯಾನ್, ಸಂಜಯ್ ಶಾಮ್ ರಾವ್, ಅನುರಾಗ್ ಸಿಂಗ್ ಠಾಕೂರ್,ಸುರೇಶ್ ಅಂಗಡಿ, ನಿತ್ಯಾನಂದ್ ರಾಯ್, ರತನ್ ಲಾಲ್ ಕಠಾರಿಯಾ, ವಿ.ಮುರಳೀಧರನ್, ರೇಣುಕಾ ಸಿಂಗ್ ಸರೂಟ, ಸೋಮ್ ಪ್ರಕಾಶ್, ರಾಮೇಶ್ವರ್ ತೇಲಿ,ಪ್ರತಾಪ್ ಚಂದ್ರ ಸಾರಂಗಿ, ಕೈಲಾಶ್ ಚೌಧರಿ, ದೇವಶ್ರೀ ಚೌಧರಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು.

ಇನ್ನು ಯಾರಿಗೆ ಯಾವ ಖಾತೆ ಅನ್ನೋ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕಾರ್ಯಕ್ರಮದಲ್ಲಿ ರಾಜ್ಯದ ಗಣ್ಯಾತಿಗಣ್ಯರು ಸೇರಿದಂತೆ ಬಾಂಗ್ಲಾದೇಶ, ಮ್ಯನಮ್ಯಾರ್, ಶ್ರೀಲಂಕಾ ನೇಪಾಳ, ಭೂತಾನ್, ಇಂಡೋನೋಶಿಯಾ ಅಧ್ಯಕ್ಷರು ಹಾಜರಿದ್ದರು.

- Advertisement -

Latest Posts

Don't Miss