Saturday, October 12, 2024

Latest Posts

ಮೋದಿ ಪಟ್ಟಾಭಿಷೇಕಕ್ಕೆ ಕೌಂಟ್ ಡೌನ್…!!

- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಭಾರತ ಪ್ರಧಾನಿಯಾಗಿ  ಪ್ರಮಾಣವಚನ ಸ್ವೀಕಾರಿಸೋದಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ.ರಾಷ್ಟ್ರಪತಿ ಭವನದಲ್ಲಿ ನಡೆಯಲಿರೋ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸುಮಾರು 6,500 ಮಂದಿ ಭಾಗಿಯಾಗೋ ನಿರೀಕ್ಷೆ ಇದ್ದು, ಸಮಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ.

ಸಮಾರಂಭದಲ್ಲಿ ಬಾಂಗ್ಲಾದೇಶ್,ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಭೂತಾನ್, ಥೈಲ್ಯಾಂಡ್, ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

 ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದ ಫೋರ್ ಕೋರ್ಟ್ ನಲ್ಲಿ ಪ್ರಮಾಣವಚನ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಇಲ್ಲಿ ಸುಮಾರು 500 ಅತಿಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಸಮಾರಂಭದಲ್ಲಿ ಭಾಗವಹಿಸೋ ಅತಿಥಿಗಳಿಗೆ ಲಘು ಉಪಹಾರ ಜೊತೆಗೆ ಲೆಮನ್ ಟೀ ನೀಡಲಾಗುತ್ತೆ ಬಳಿಕ ಭೋಜನಕ್ಕೆ ವೆಜ್ ಮತ್ತು ನಾನ್ ವೆಜ್ ಖಾದ್ಯಗಳು ಸಿದ್ದವಾಗ್ತಿವೆ. ಇನ್ನು ಭೋಜನದಲ್ಲಿ ಸ್ಪೆಷಲ್ ಆಗಿ ದಾಲ್ ರೈಸಿನಾ ಎಂಬ ಖಾದ್ಯವನ್ನು ತಯಾರಿಸಲಾಗ್ತಿದೆ. ಇದರ ವಿಶೇಷತೆ ಏನಪ್ಪಾ ಅಂದ್ರೆ ಇದನ್ನ ತಯಾರಿಸೋದಕ್ಕೆ 48 ಗಂಟೆ , ಅಂದ್ರೆ  ಬರೋಬ್ಬರಿ 2 ದಿನಗಳ ಕಾಲ ಬೇಕಾಗಲಿದ್ದು ಅತ್ಯಂತ ಸ್ವಾದಭರಿತವಾಗಿರುತ್ತೆ.

ಇನ್ನು ಪ್ರಮಾಣವಚನ ಸಮಾರಂಭದ ವೇದಿಕೆ ಹಾಗೂ ಸುತ್ತಮುತ್ತ ಟೈಟ್ ಸೆಕೂರಿಟಿ ಏರ್ಪಡಿಸಲಾಗಿದ್ದು, ಭದ್ರತಾ ದೃಷ್ಟಿಯಿಂದ ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಅತಿಥಿಗಳಿಗೆ ಸಮಾರಂಭದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿದ್ದು ಕರ್ನಾಟಕದ ಈ ನಾಲ್ವರಿಗೆ ಮಾತ್ರ…! ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ

- Advertisement -

Latest Posts

Don't Miss