Banglore News:
ಬೆಂಗಳೂರು: ಖ್ಯಾತ ಹಿರಿಯ ಹೃದ್ರೋಗ ತಜ್ಞ ಡಾ.ಕಿಶೋರ್ ಅವರ ನೇತೃತ್ವದಲ್ಲಿ ಸಾಗರ್ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಬೈಕಥಾನ್ ಆಯೋಜಿಸಲಾಗಿತ್ತು.ಸಾಗರ್ ಆಸ್ಪತ್ರೆ ಪ್ರತಿವರ್ಷ ಹೃದ್ರೋಗ ತಡೆಗಟ್ಟುವಿಕೆ ಹಾಗೂ ಆರೋಗ್ಯಕರ ಹೃದಯಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ.ಈ ವರ್ಷ ಬೈಕಥಾನ್ ಆಯೋಜಿಸಲಾಗಿತ್ತು.
ಭಾರತದಲ್ಲಿ ಹೆಚ್ಚುತ್ತಿರುವ ತೀವ್ರ ಹೃದಯಾಘಾತ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಈ ಬೈಕಥಾನ್ ನಡೆಸಲಾಯಿತು ಯುವ ಜನತೆ, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಹೃದ್ರೋಗದ ದುಷ್ಪರಿಣಾಮಗಳು ಮತ್ತು ಆರೋಗ್ಯಕರ ಹೃದಯದ ಬಗ್ಗೆ ಅರಿವು ಮೂಡಿಸುವುದು ಈ ಬೈಕಥಾನ್ ಉದ್ದೇಶವಾಗಿತ್ತು. ಅಕ್ಟೋಬರ್ ೨ ರಂದು ಬೆಳಗ್ಗೆ ಕುಮಾರಸ್ವಾಮಿ ಲೇಔಟ್ ಸಾಗರ ಆಸ್ಪತ್ರೆ ಯಿಂದ ಆರಂಭವಾದ ಬೈಕ್ ಥಾನ್ ಕುಮಾರಸ್ವಾಮಿ ಲೇಔಟ್. ಬನಶಂಕರಿ. ಪದ್ಮನಾಭನಗರ.ಸೇರಿದಂತೆ ವಿವಿಧ ಕಡೆಗಳಲ್ಲಿ ಜಾಗೃತಿ ಮೂಡಿಸಿ ಆಸ್ಪತ್ರೆಗೆ ಆಗಮಿಸಿ ಸಮಾವೇಶಗೊಂಡಿತ್ತು.
ಇದೇ ಸಂಧರ್ಭದಲ್ಲಿ ಮಾತನಾಡಿದ ಖ್ಯಾತ ಹೃದಯ ತಜ್ಞ ಡಾ.ಕಿಶೋರ್ ಅವರು ಮಾತನಾಡುತ್ತಾ ನಿಮ್ಮ ಹೃದಯವು ನಿಮ್ಮ ಇಡೀ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಇದು ನೀವು ಪ್ರೀತಿಸಲು, ನಗಲು ಮತ್ತು ನಿಮ್ಮ ಪರಿಪೂರ್ಣ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕಾಗಿ ನೀವು ನಿಮ್ಮ ಹೃದಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ನೀವೇ ನಿಮ್ಮ ಹೃದಯವನ್ನು ಆಪತ್ತಿಗೆ ಒಳಪಡಿಸಿ ನಿಮ್ಮ ಅಮೂಲ್ಯ ಜೀವನಕ್ಕೆ ಗಂಡಾಂತರ ತಂದುಕೊಳ್ಳುತ್ತೀರಿ. ಅಂಥಾ ಹೇಳಿದರು.
ನಂತರ ಮಾತನಾಡಿದ ಸಾಗರ್ ಆಸ್ಪತ್ರೆಯ ಸಿ.ಎಫ್.ಓ ವೆಂಕಟೇಶ ಪ್ರಸಾದ ಅವರು ಮಾತನಾಡುತ್ತಾ ದೈನಂದಿನ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ, ಆರೋಗ್ಯಕರ ಆಹಾರ ಮತ್ತು ನೀರು ಸೇವನೆಯಿಂದ, ದೂಮಪಾನ ವ್ಯರ್ಜಿಸುವುದರಿಂದ ಮತ್ತು ನಿಯತವಾಗಿ ವ್ಯಾಯಾಮ ಮಡುವುದರಿಂದ ಹೃದ್ರೋಗ ಉಲ್ಬಣಗೊಳ್ಳುವುದಕ್ಕೆ ಕಡಿವಾಣ ಹಾಕಬಹುದು.ಅಂಥಾ ಹೇಳಿದ ಅವರು ಪ್ರತಿ ವರ್ಷ ನಮ್ಮ ಆಸ್ಪತ್ರೆಯ ಮೂಲಕ ವಿಶ್ವ ಹೃದಯ ದಿನ ಆಚರಣೆ ಮಾಡುತ್ತಾ ಬರುತ್ತೀದ್ದು ಈ ವರ್ಷ ಬೈಕಥಾನ್ ಆಯೋಜಿಸಲಾಗಿತ್ತು ಅಂಥಾ ಹೇಳಿದರು.
ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಯಿತು “ಟಿ.ವಿ.ನಗರ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ”