National News: ಕೆಲ ದಿನಗಳ ಹಿಂದಷ್ಟೇ ಗೋವಾದಲ್ಲಿ ಓರ್ವ ವ್ಯಕ್ತಿ ಕೋಟಿ ಕೋಟಿ ಹಣವಿರುವ ನೋಟುಗಳನ್ನು ಲಾಕರ್‌ನಲ್ಲಿಟ್ಟು ಸಾವನ್ನಪ್ಪಿದ್ದು, ಮಕ್ಕಳು ಮನೆ ಖಾಲಿ ಮಾಡುವಾಗ, ಆ ಹಣ ಸಿಕ್ಕಿತ್ತು ಅನ್ನೋ ಸುದ್ದಿಯಾಗಿತ್ತು. ಆದರೆ ಆ ಹಣದಿಂದ ಅವರಿಗೆ 1 ರೂಪಾಯಿ ಕೂಡ ಲಾಭವಾಗಿರಲಿಲ್ಲ. ಯಾಕಂದ್ರೆ ಅವೆಲ್ಲವೂ ಬ್ಯಾನ್ ಆಗಿರುವ ನೋಟ್ ಆಗಿತ್ತು. ಆದರೆ ಇಲ್ಲೋರ್ವ ಯುವಕನಿಗೆ ಅಪ್ಪ ಖರೀದಿಸಿದ್ದ ಶೇರಿನ ದಾಖಲೆ ಪತ್ರ ಸಿಕ್ಕಿದ್ದು, ಯುವಕ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.
1990ರಲ್ಲಿ ಈ ವ್ಯಕ್ತಿಯ ಅಪ್ಪ 1 ಲಕ್ಷ ರೂಪಾಯಿ ನೀಡಿ, ಜಿಂದಾಲ್ ಕಂಪನಿಯ ಶೇರ್ಸ್ ಖರೀದಿ ಮಾಡಿದ್ದರು. ಅದರ ಮೌಲ್ಯವೀಗ 80 ಕೋಟಿಯಾಗಿದೆ. ಮನೆ ಕ್ಲೀನ್ ಮಾಡುವಾಗ, ದಾಖಲೆ ಪತ್ರ ಸಿಕ್ಕಿದ್ದು, 35 ವರ್ಷದ ಹಿಂದೆ ಖರೀದಿಸಿದ್ದ ಶೇರ್ ವ್ಯಾಲ್ಯೂ ಈಗ ಲಕ್ಷ ಪಟ್ಟಾಗಿದೆ.
ಶೇರು ಮೌಲ್ಯ 80 ರೂಪಾಯಿ ಇದ್ದಾಗ ಈ ಶೇರ್ಸ್ ಖರೀದಿಸಿದ್ದು, ಈಗ ಅದರ ಮೌಲ್ಯ 80 ಕೋಟಿ ರೂಪಾಯಿಯಾಗಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ತಿಂಗಳಿಗೆ 700-800 ಸಂಬಳ ಪಡೆಯುತ್ತಿದ್ದ ಆ ಕಾಲದಲ್ಲೇ ನಿಮ್ಮ ತಂದೆ 1 ಲಕ್ಷ ನೀಡಿ ಶೇರ್ಸ್ ಖರೀದಿ ಮಾಡಿದ್ದಾರೆಂದರೆ, ನಿಮ್ಮ ತಂದೆ ಸೂಪರ್ ರಿಚ್ ಎಂದಿದ್ದಾರೆ.
ಒಟ್ಟಾರೆಯಾಗಿ ನೋಟುಗಳನ್ನು ಕೂಡಿಟ್ಟು ಮೂರ್ಖತನ ಮಾಡದೇ, ಶೇರ್ಸ್ ಖರೀದಿ ಮಾಡಿ, ಈ ಯುವಕನ ಅಪ್ಪ ಜಾಣತನ ಮೆರೆದಿದ್ದು, ಮಗನ ಜೀವನಕ್ಕಾದರೂ ಆ ಹಣ ಬಳಕೆಯಾಗುತ್ತಿದೆ ಅನ್ನೋದೇ ಉತ್ತಮ ವಿಷಯ.