ನಮಸ್ತೆ ಗೆಳೆಯರೇ ಇಂದು ನೈಸರ್ಗಿಕವಾದ ಹೇರ್ ಆಯಿಲ್ ಅನ್ನು ತಿಳಿದುಕೊಳ್ಳೋಣ. ಈ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿಮಗೆ ಏನಾದರೂ ಬಿಳಿ ಕೂದಲಿನ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಮತ್ತೆ ನಿಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಈ ಎಣ್ಣೆ ತುಂಬಾನೇ ಸಹಾಯ ಮಾಡುತ್ತದೆ. ಮೊದಲನೆಯದಾಗಿ ನೀವು ನುಗ್ಗೆ ಎಲೆಗಳನ್ನು ತೆಗೆದು ಕೊಳ್ಳಿ. ಇನ್ನೂ ಎರಡನೆಯದಾಗಿ ಕರಿಬೇವು ಎಲೆಗಳು ತೆಗೆದು ಕೊಳ್ಳಿ. ಇದರಲ್ಲಿ ಬೀಟಾ ಕೆರೋಟಿನ್ ಮತ್ತೆ ಪ್ರೊಟೀನ್ ಅಂಶ ಜಾಸ್ತಿ ಇರುವುದರಿಂದ ನಿಮ್ಮ ಹೇರ್ ಲಾಸ್ ಮತ್ತೆ ತಲೆ ಹೊಟ್ಟು ಬೇಗನೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಮೂರನೆಯದು ಬೇವಿನ ಎಲೆಗಳನ್ನು ಸೇರಿಸಿಕೊಳ್ಳಿ. ಇದರಲ್ಲಿ ಆಂಟಿ ಫಂಗಲ್ ಆಂಟಿ ಆಕ್ಸಿಡೆಂಟ್ ಆಂಟಿ ಬ್ಯಾಕ್ಟೀರಿಯಾ ಪ್ರಾಪರ್ಟಿ ಇರುವುದರಿಂದ ಬೇಗನೆ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನು ತಲೆ ಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಈ ಮೂರು ಎಲೆಗಳನ್ನು ನೀವು ಸ್ವಚ್ಛವಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ಈಗ ಈ ಎಲೆಗಳನ್ನು ಬಿಡಿಸಿ ಬೇರೆ ಬೇರೆ ಬೌಲ್ ಗೆ ಹಾಕಿಕೊಳ್ಳಿ. ಈ ಮೂರು ಎಲೆಗಳಲ್ಲಿ ಜಿಂಕ್, ಒಮೆಗಾ ಪ್ಯಾಟಿ ಆಸಿಡ್ ಮತ್ತೆ ಪ್ರೊಟೀನ್ ಮಿನರಲ್ಸ್, ಮತ್ತೆ ಐರನ್ ಅಂಶ ಹೆಚ್ಚಾಗಿ ಇರುವುದರಿಂದ ಬಿಳಿ ಕೂದಲಿನ ಸಮಸ್ಯೆ,ಕೂದಲು ಉದುರುವ ಸಮಸ್ಯೆ ಮತ್ತೆ ನಿಮ್ಮ ಕೂದಲು ವೇಗವಾಗಿ ಬೆಳೆಯಲು ಈ ಸೊಪ್ಪುಗಳು ಮತ್ತೆ ಈ ಎಲೆಗಳು ತುಂಬಾನೇ ಸಹಾಯ ಮಾಡುತ್ತದೆ. ಈಗ ಒಂದು ಒಲೆಯ ಮೇಲೆ ಒಂದು ಪಾತ್ರೆಯನ್ನು ಕಾಯಲು ಇಡಿ. ಈ ಎಣ್ಣೆಯನ್ನು ತಯಾರಿಸಲು ಬೇಕಾಗುವ ನಾಲ್ಕನೆಯ ಸಾಮಗ್ರಿ ಎಂದರೆ ಕೊಬ್ಬರಿ ಎಣ್ಣೆ. ಈ ಎಣ್ಣೆಯನ್ನು ಪಾತ್ರೆಯಲ್ಲಿ ಹಾಕಿಕೊಳ್ಳಿ. ಇದನ್ನು ಐದು ನಿಮಿಷದವರೆಗೆ ಕಾಯಿಸಿಕೊಳ್ಳಿ. ಎಣ್ಣೆ ಬಿಸಿ ಆದ ಮೇಲೆ ಒಂದೊಂದಾಗಿ ಈ ಎಲೆಗಳನ್ನು ಹಾಕುತ್ತಾ ಬನ್ನಿ. ಮೊದಲಿಗೆ ಕರಿಬೇವು ಸೊಪ್ಪು ಹಾಕಿಕೊಳ್ಳಿ. ಎರಡನೆಯದು ಬೇವಿನ ಎಲೆಗಳನ್ನು ಹಾಕಿ. ಮೂರನೇಯದು ನುಗ್ಗೆ ಸೊಪ್ಪು ಹಾಕಿಕೊಂಡು ಈ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಕಾಯಲು ಬಿಡಿ. ಈ ಎಲೆಗಳಲ್ಲಿ ಇರುವ ನೀರಿನ ಅಂಶ ಹೋಗುವವರೆಗೂ ಈ ಎಣ್ಣೆಯಲ್ಲಿ ಈ ಎಲೆಗಳನ್ನು ಕುದಿಸಿಕೊಳ್ಳಿ 10 ರಿಂದ 20 ಈ ಎಲೆಗಳು ಈ ಎಣ್ಣೆಯಲ್ಲಿ ಕುದಿಯಲು ಬಿಡಿ. ಸ್ನೇಹಿತರೆ ಈಗ ಈ ಎಣ್ಣೆ ಸಿದ್ಧವಾಗಿದೆ. ಈಗ ಇದನ್ನು ಒಂದು ಬಟ್ಟೆಯ ಸಹಾಯದಿಂದ ಶೋಧಿಸಿ ಕೊಳ್ಳಿ. ಸೋಸಿ ಕೊಂಡ ನಂತರ ಈ ಎಣ್ಣೆಯನ್ನು ಒಂದು ಗಾಜಿನ ಬಾಟಲ್ ನಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ. ಈ ಎಣ್ಣೆಯನ್ನು ನಿಮ್ಮ ನೆತ್ತಿಯ ಭಾಗಕ್ಕೆ, ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಕೂದಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನ್ಯಾಚುರಲ್ ಆಗಿ ನಿಮ್ಮ ಕೂದಲನ್ನು ಕಪ್ಪು ಆಗಿ ಮಾಡಲು ಜೊತೆಗೆ ಗಟ್ಟಿ ಮುಟ್ಟಾಗಿ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ತಲೆ ಹೊಟ್ಟು ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಈ ಎಣ್ಣೆಗೆ ಎಷ್ಟು ಹಚ್ಚು ಹಸಿರು ಬಣ್ಣ ಬರುತ್ತದೆಯೋ ಅಷ್ಟೊಂದು ಇದು ಪರಿಣಾಮಕಾರಿ ಅಂತ ಸುಲಭವಾಗಿ ಅರ್ಥೈಸಿ ಕೊಳ್ಳಬಹುದು. ಅಲ್ಲದೆ ಇದು ಕೂದಲಿಗೆ ತುಂಬಾನೇ ಅದ್ಭುತವಾಗಿ ಕೆಲಸವನ್ನು ಮಾಡುತ್ತದೆ.