Wednesday, July 2, 2025

Latest Posts

ನಾಯಿ ವಿಷ್ಯಕ್ಕೆ ರೇಗಿದ್ರು ಮೋಹಕತಾರೆ ರಮ್ಯಾ

- Advertisement -

ರಾಜಕೀಯ ಸಿನಿಮಾದಿಂದ ಎರಡರಿಂದಲೂ ದೂರವೇ ಉಳಿದಿರೋ ರಮ್ಯ ಈಗ ಮತ್ತೆ ಸುದ್ದಿಯಲ್ಲಿದ್ದಾರೆ ಅದಕ್ಕೆ ಕಾರಣ ಬೀದಿನಾಯಿ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಗೆ ನಾಯಿ ಅಂದ್ರೆ ಅದೆಷ್ಟು ಪ್ರೀತಿ ಅನ್ನೋದು ಮತ್ತೆ ಮತ್ತೆ ಸುದ್ದಿಯಾಗುತ್ತೆ. ರಮ್ಯ ಜೊತೆಗೊಂದು ನಾಯಿಮರಿ ಇತ್ತು ಅದರ ಹೆಸ್ರು ಬ್ರಾö್ಯಂಡಿ ಅಂತ ಅದನ್ನು ರಮ್ಯ ಅದೆಷ್ಟು ಪ್ರೀತಿ ಮಾಡ್ತಿದ್ರು ಅಂತ ಬಹುತೇಕ ಕರ್ನಾಟಕಕ್ಕೇ ಗೊತ್ತಿದೆ. ರಾಕಿಂಗ್‌ಸ್ಟಾರ್ ಯಶ್-ರಮ್ಯ ಜೋಡಿಯಾಗಿದ್ದ ಸಿನಿಮಾ “ಲಕ್ಕಿ” ಕಥೆಗೆ ಲಕ್ಕಿ ಕ್ವೀನ್ ರಮ್ಯ ಪ್ರಾಣಿಪ್ರೇಮವೇ ಪ್ರೇರಣೆ ಅನ್ನೋದು ಕೂಡ ಸತ್ಯ.
ಈಗ ರಮ್ಯ ಟ್ವಿಟ್ಟರ್‌ನಲ್ಲಿ ಬೀದಿ ನಾಯಿಗಾದ ಅನ್ಯಾಯದ ವಿಚಾರಕ್ಕೆ ಸಿಟ್ಟಿಗೆದ್ದಿದ್ದಾರೆ. ಜಯನಗರ ಮೊದಲನೇ ಬ್ಲಾಕ್‌ನಲ್ಲಿ ಆದಿಕೇಶವಲು ಮೊಮ್ಮಗ ಆದಿ ಐಶಾರಾಮಿ ಕಾರ್‌ನಲ್ಲಿ ಬಂದು ಬೀದಿನಾಯಿಯನ್ನು ಕೊಂದಿರುವ ವಿಚಾರವಾಗಿ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಹಾಗೆ ನೋಡಿದ್ರೆ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಆಕ್ಟೀವ್ ಇಲ್ಲ. ರಾಜಕೀಯ ಮತ್ತು ಸಿನಿಮಾ ಬಗ್ಗೆ ಯಾವುದೇ ಟ್ವೀಟ್ ಅಥವಾ ಪೋಸ್ಟ್ ಮಾಡ್ತಿಲ್ಲ ಆದರೆ ಬೀದಿ ನಾಯಿಗಾದ ಅನ್ಯಾಯದ ವಿರುದ್ಧ ಧನಿ ಎತ್ತಿದ್ದಾರೆ. ಎರಡೆರೆಡು ಬಾರಿ ಟ್ವೀಟ್ ಮಾಡಿರೋ ರಮ್ಯ ಸರ್ಕಾರ ಯಾವುದೇ ರೀತಿಯ ಒತ್ತಡಕ್ಕೆ ಮಣಿಯಬಾರದು ಸಂಬAಧಪಟ್ಟ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಮ್ಯ ಮಾತ್ರವಲ್ಲ, ನಟಿ ಐಂದ್ರಿತಾ ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇನ್ನು ಆದಿಕೇಶುವುಲು ಹೈ ಪ್ರೊಫೈಲ್ ವ್ಯಕ್ತಿಯಾಗಿದ್ದು ಈಗಾಗಲೇ ಕೇಸ್ ದಾಖಲಾದರೂ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಅನುಮಾನವನ್ನು ಪ್ರಾಣಿಪ್ರೇಮಿಗಳು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆದಿ ಕೋವಿಡ್ ಪಾಸಿಟೀವ್ ಎನ್ನುವ ಕಾರಣ ಕೊಟ್ಟು ತಾತ್ಕಾಲಿಕ ವಿಚಾರಣೆಗೆ ತಪ್ಪಿಸಿಕೊಂಡಿದ್ದು ಸಾರ್ವಜನಿಕರಿಂದ ಮೂಕಪ್ರಾಣಿಯ ಬಲಿಪಡೆದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

- Advertisement -

Latest Posts

Don't Miss