Hubli News: ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ ಕರ್ನಾಟಕವೇ ಬೆಚ್ಚಿಬೀಳಿಸುವ ರಾಕ್ಷಸೀ ಕೃತ್ಯ ನಡೆದಿದೆ. ನೇಹಾ ಕಹತ್ಯೆಯಿಂದ ನಮಗೆಲ್ಲ ನೋವಾಗಿದೆ, ತಲೆತಗ್ಗಿಸುವ ಹೀನಕೃತ್ಯವಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಅನೇಕ ಘಟನೆಗಳು ನಡೆದಿವೆ. ಸಮಾಜಕ್ಕೆ ಆಸ್ತಿ ಆಗುವ ಹೆಣ್ಣುಮಗುವನ್ನು ಹತ್ಯೆ ಮಾಡಲಾಗಿದೆ. ಘಟನೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಈ ವಿಚಾರವಾಗಿ ಸರ್ಕಾರದ ಪ್ರತಿನಿಧಿಗಳು ಬೇಜವಾಬ್ದಾರಿ ಹೇಳಿಕೆ ಕೊಡಬಾರದು, ವಿದ್ಯಾರ್ಥಿಗಳು ನಿರ್ಭಯವಾಗಿ ಇರುವಂತೆ ಮಾಡಲು ಕಠಿಣ ಶಿಕ್ಷೆ ಕೈಗೊಳ್ಳಬೇಕು. ತ್ವರಿತ ನ್ಯಾಯ ಕೊಡುವ ಕೆಲಸ ಆಗಬೇಕು.
ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಆಗಬಾರದು. ನಾವು ಏನು ಮಾಡಿದರೂ ನಡೆಯುತ್ತೆ ಅನ್ನೋ ಮನಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಇಂತಹ ಘಟನೆಗಳು ಮರುಕಳಿಸುತ್ತಿವೆ. ಯಾರೇ ಆಗಲಿ ಬೇಜವಾಬ್ದಾರಿ ಹೇಳಿಕೆ ಕೊಡಬಾರದು. ಕುಟುಂಬಕ್ಕೆ ನೋವು ತರುವ ಹಾಗೆ ಯಾರೂ ಮಾತನಾಡಬಾರದು ಎಂದರು.
ಕಾಂಗ್ರೆಸ್ ನಮ್ಮ ರಾಜ್ಯದಲ್ಲಿ “ಇವತ್ತು ಜೈಲ್, ನಾಳೆ ಬೇಲ್” ಎಂಬ ಸರಳ ಪ್ರೋಟೋಕಾಲ್ ಸ್ಥಾಪಿಸಿದೆ: ತೇಜಸ್ವಿ ಸೂರ್ಯ
ಇದೇನಾ ನಿಮ್ಮ ಮೊಹಬ್ಬತ್ ಕೀ ದುಕಾನ್?? ನಾಚಿಕೆಗೇಡು ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಬಸನಗೌಡ ಪಾಟೀಲ್ ಯತ್ನಾಳ್