- Advertisement -
ನಟ ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರ, ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಹಾಗಾಗಿ ಡಾಲಿ ಧನಂಜಯ್ ಈ ಸಿನಿಮಾಗೆ ಡಿಫ್ರೆಂಟ್ ಆಗಿ ಪ್ರಚಾರ ಮಾಡುತ್ತಿದ್ದಾರೆ. ಜಯರಾಜ್ ಗೆಟಪ್‌ನಲ್ಲೇ ಡಾಲಿ, ಬೆಲ್ ಬಾಟಂ ತೊಟ್ಟು, ಏರ್‌ಪೋರ್ಟ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.
ಅಲ್ಲದೇ, ಫ್ಲೈಟ್ ಹತ್ತಿ ದುಬೈ ಹೊರಟಿದ್ದಾರೆ. ಇವರ ಗೆಟಪ್ ನೋಡಿದ್ರೆ, ಡಾಲಿ ದುಬೈ ಶೇಕ್ಸ್ ಜೊತೆ ಹೆಡ್ ಬುಷ್ ಆಟ ಆಡ್ತಾರೇನೋ ಅನ್ನೋ ಥರಾ ಇದೆ. ದುಬೈನಲ್ಲಿ ನಡೆಯಲಿರೋ, ರಾಜ್ ಕಪ್‌ಗಾಗಿ ಕ್ರಿಕೇಟ್ ಆಡಲು ಹೋಗಿರುವ ಧನಂಜಯ್, ಹೆಡ್ ಬುಷ್ ಚಿತ್ರದ ಪ್ರಚಾರವನ್ನ ವಿಭಿನ್ನವಾಗಿ ಮಾಡಲು ಹೊರಟಿದ್ದಾರೆ.
ಹೆಡ್ ಬುಷ್ ಚಿತ್ರ ಅಕ್ಟೋಬರ್ 21ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗ್ತಿದೆ. ಈ ನಡುವೆ ಧನಂಜಯ ವಿಶ್ವ ಪರಿರ್ಯಟನೆ ಮಾಡ್ತಾ ಸಿನಿಮಾವನ್ನ ಪ್ರಚಾರ ಮಾಡ್ತಿದ್ದಾರೆ.
- Advertisement -