Movie News: ಭುವನ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ “ಶಾನುಭೋಗರ ಮಗಳು” ಚಿತ್ರವು ಸ್ವತಂತ್ರ ಪೂರ್ವ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಇದರ ಲೇಖಕಿ: ಶ್ರೀಮತಿ. ಭಾಗ್ಯ ಕೆ ಮೂರ್ತಿ. ಚಿತ್ರದಲ್ಲಿ ಬ್ರಿಟಿಷರು, ಟಿಪ್ಪು ಸುಲ್ತಾನ್ ಹಾಗೂ ಮೈಸೂರಿನ ಮಹಾರಾಜರುಗಳೊಂದಿಗಿನ ಸನ್ನಿವೇಶಗಳು ಹೆಚ್ಚಿವೆ.
“ಶಾನುಭೋಗರ ಮಗಳ” ಪಾತ್ರ ನಿರ್ವಹಿಸುತ್ತಿರುವ ರಾಗಿಣಿ ಪ್ರಜ್ವಲ್ ನಾಲ್ಕಾರು ಬ್ರಿಟಿಷರನ್ನು ಗುಂಡಿಟ್ಟು ಸಾಯಿಸುವ ದೃಶ್ಯವನ್ನು ಇತ್ತೇಚಿಗೆ ಶ್ರೀರಂಗ ಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ಚಿತ್ರೀಕರಿಸಲಾಯಿತು. ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ಅಭಿನಯಿಸುತ್ತಿದ್ದು, ರಮೇಶ್‍ಭಟ್, ಸುಧಾಬೆಳವಾಡಿ, ಪದ್ಮಾ ವಾಸಂತಿ, ವಾಣಿಶ್ರೀ, ಭಾಗ್ಯಶ್ರೀ, ಕುಮಾರಿ ಅನನ್ಯ, ಟಿ.ಎನ್. ಶ್ರೀನಿವಾಸ ಮೂರ್ತಿ, ನಿರಂಜನ ಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ.
ಸಂಗೀತ ನಿರ್ದೇಶನ ಡಾ|| ಶಮಿತಾ ಮಲ್ನಾಡ್, ಚಿತ್ರಕತೆ-ಸಂಭಾಷಣೆ: ಬಿ.ಎ. ಮಧು, ಛಾಯಾಗ್ರಹಣ ಜೈ ಆನಂದ್, ಸಂಕಲನ: ಕೆಂಪರಾಜ್, ನಿರ್ಮಾಣ ನಿರ್ವಹಣೆ: ಕರುಣ್ ಮಯೂರ್, ಸಹ ನಿರ್ದೇಶನ: ರಘು ಕುಮಾರ್, ನಾಗರಾಜ ರಾವ್ ಹಾಸನ್ ಹಾಗೂ ಸುನೀಲ್ ಅವರದು.
ಸ್ಯಾಂಡಲ್ ವುಡ್ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು “ಜಿಮ್ಮಿ” ಚಿತ್ರದ ಕ್ಯಾರೆಕ್ಟರ್ ಟೀಸರ್ .
ನಟ ರಿಷಬ್‌ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ಪ್ರಧಾನ : ಪಂಚೆಯಲ್ಲಿ ಮಿಂಚಿದ ಕಾಂತಾರ ಶಿವ
ಅಭಿಯಾನಕ್ಕೆ ಮಣಿದ ಮಾಲೀಕ: 7 ಸ್ಟಾರ್ ಸುಲ್ತಾರ್ ಕುರ್ಬಾನಿ ಕೊಡದಿರಲು ನಿರ್ಧಾರ